ಬೆಳ್ತಂಗಡಿ : ತೆಂಕುತಿಟ್ಟು ಶೈಲಿಯ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಇಂದು ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ದಾಮೋದರ ಮಂಡೆಚ್ಚ ಅವರ ಶಿಷ್ಯರಾದ ದಿನೇಶ್ ಅಮ್ಮಣ್ಣಯ್ಯ ಅವರು ಕರ್ನಾಟಕ ಮೇಳ, ಎಡನೀರು ಮೇಳ ಮತ್ತು ಇತರ ತೆಂಕುತಿಟ್ಟು ಮೇಳಗಳೊಂದಿಗೆ ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯರನ್ನು ‘ಗಾನ ಕೋಗಿಲೆ’ ಮತ್ತು ‘ರಸ ರಾಗ ಚಕ್ರವರ್ತಿ’ ಎಂದು ಕರೆಯುತ್ತಿದ್ದರು.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿಯಾದ ಅಮ್ಮಣ್ಣಾಯ ಅವರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕನ್ಯಾಡಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನರಾದರು.

