ಮಂಗಳೂರು : ಪೇಸ್ ಗ್ರೂಪ್ನ ಬೆಳ್ಳಿ, ಹಬ್ಬ ಪೇಸ್ ಸಿಲ್ಕ್ಯೋರಾ 2025 ರ ಇದರ ಅಂಗವಾಗಿ, ಪಿ.ಎ. ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ.ಎ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್ ಕ್ರೋಮಾ 2025 ಎಂಬ ರಾಷ್ಟ್ರೀಯ ಮಟ್ಟದ ಉತ್ಸವ ಮತ್ತು ಆಹಾರ ಮೇಳವನ್ನು ಅಕ್ಟೋಬರ್ 30 ರಂದು ಮಂಗಳೂರು ವಿ.ವಿ ಸಮೀಪವಿರುವ ಪೇಸ್ ಜ್ಞಾನ ನಗರ ಕೊಣಾಜೆಯಲ್ಲಿ ನಡೆಯಲಿದೆ ಎಂದು ಪಿ.ಎ ಪ್ರಥಮ ದರ್ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ಈ ಉತ್ಸವವು ಯುವ ಶಕ್ತಿ, ಸೃಜನಶೀಲತೆ ಮತ್ತು ನಾವೀನ್ಯತೆಯ ಉತ್ಸವವಾಗಿದ್ದು,ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಹಂಚಿಕೊಳ್ಳಲು, ಆಸಕ್ತಿಗಳನ್ನು ಅನ್ವೇಷಿಸಲು ಹಾಗೂ ತರಗತಿಯಾಚೆಯ ಕಲಿಕೆಗೆ ಉಪಯುಕ್ತವಾಗಿರಲಿದೆ . ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಇದಾಗಿದ್ದು ರಾಜ್ಯ ಅಂತರರಾಜ್ಯದ ಪಿಯು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಪಿ.ಎ, ಎಜುಕೇಷನಲ್ ಟ್ರಸ್ಟ್, ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿಗಳಾದ ಅಬ್ದುಲ್ಲಾ ಇಬ್ರಾಹಿಂ
ಭಾಗವಹಿಸಿದರೆ ,ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಪಿ.ಬಿ. ಅಹ್ಮದ್ ಮುದಸ್ಮರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮತ್ತು ಪಾಲುದಾರರು, ಪಿ. ಬಿ. ಅಬ್ದುಲ್ ಹಮೀದ್ & ಸನ್ಸ್ , ಮಂಗಳೂರು ಇವರು ನೆರವೇರಿಸಲಿರುವರು . ಗೌರವ ಅತಿಥಿಗಳಾಗಿ ಇನ್ಫ್ಲವೆನ್ಸರ್ ಮತ್ತು ಪುಡ್ ಬ್ಲಾಗರ್ ಅಬ್ದುಲ್ ಬಾಸೀಮ್ ನಳಕತ್ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ . ಸಯ್ಯದ್ ಅಮೀನ್ ಅಹಮ್ಮದ್ , ಉಪನ್ಯಾಸಕಿ ಮುನೀರಾ , ಪ್ರೊ ಅಬ್ದುಲ್ ಸಮೀರ್ ಉಪಸ್ಥಿತರಿದ್ದರು .

