ಮಂಗಳೂರು : ದಕ್ಷಿಣ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್, ಬಂಟ್ವಾಳ ಇದರ ಶಿಲ್ಪಿ ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿ ಸನದುದಾನ ಮಹಾ ಸಮ್ಮೇಳನ 2025 ಕಾರ್ಯಕ್ರಮವು ಅಕ್ಟೋಬರ್ 18,19,20 ರಂದು ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಕೆ ಮೆಹ್ಯುದ್ದೀನ್ ಸಖಾಫಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ, ಅಕ್ಟೋಬರ್ 18 ರಂದು ಬೆಳಗ್ಗೆ 9:30ಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷರು ಬಹು ಅಬೂಬಕ್ಕರ್ ಮುಸ್ಲಿಯಾರ್ ಬೋಳ್ಮಾರ್ ನೇತೃತ್ವದಲ್ಲಿ ಝಿಯಾರತಿನೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಸುಲೈಮಾನ್ ಹಾಜಿ ಸಿಂಗಾರಿ ಧ್ವಜಾರೋಹಣ ನಿರ್ವಹಿಸಲಿದ್ದಾರೆ ನಂತರ ಉಲಮಾ,ಉಮರಾ, ಸಾದಾತ್ ನಾಯಕರು ಸೇರಿ ತಾಜುಲ್ ಉಲಮಾ ಆಡಿಟೋರಿಯಂ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸುಲ್ತಾನ್ ಗೋಲ್ಡ್ ಮಂಗಳೂರು ಇದರ ಮಾಲಕರಾದ ಅಬ್ದುಲ್ ರವೂಫ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು

ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಮತ್ತು ಜನಪ್ರಿಯ ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯುವುದರೊಂದಿಗೆ 10.30 ಕ್ಕೆ ಸೌಹಾರ್ದ ಸಮಾರಂಭ ಆರಂಭಗೊಳ್ಳಲಿದೆ ಮದ್ಯಾಹ್ನ 2 ಗಂಟೆಗೆ ನಡೆಯುವ ಉಲಮಾ ಸಂಗಮಕ್ಕೆ ಜಾಮಿಯಾ ಸಅದಿಯ ಪ್ರೊಫೆಸರ್ ಸ್ವಾಲಿಹ್ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಸರಿಯಾಗಿ ಬೋಳಂತೂರಿನಿಂದ ಅಶ್-ಅರಿಯದವರೆಗೆ ಸಂದಲ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು .
ಅಕ್ಟೋಬರ್ 20 ರಂದು ಸಂಜೆ 4 ಗಂಟೆಗೆ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಸಂಸ್ಥೆಯ ಅಧ್ಯಕ್ಷರು ವಾಲೆಮುಂಡೋವ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಲಿದ್ದಾರೆ ಸನದುದಾನ ಮತ್ತು ಸನದುದಾನ ಪ್ರಭಾಷಣಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ,ಹಾಗೂ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಮೀರಿದ್ದೀನ್ ಕಾಟಿಪಳ್ಳ , ಸಿದ್ದಿಕ್ ಸಖಾಫಿ ,ತ್ವಾನ ಅಬ್ದುಲ್ ಸಹಿತ ಮುಂತಾದವರು ಉಪಸ್ಥಿತರಿದ್ದರು .

