ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ, ಮಂಗಳೂರು, ಭಾರತದ ಕ್ಸೇವಿಯರ್ ಬೋರ್ಡ್ ಆಫ್ ಹೈಯರ್ ಎಜುಕೇಷನ್ 25ನೇ ತ್ರೈವಾರ್ಷಿಕ ಸಮ್ಮೇಳನವಾದ “Empowering Minds, Embracing Change: Reimagining Higher Education for a Global Tomorrow” ಅಂದರೆ “ಮನಸ್ಸುಗಳನ್ನು ಶಕ್ತಿಗೊಳಿಸಿ, ಬದಲಾವಣೆಯನ್ನು ಸ್ವೀಕರಿಸಿ: ಜಾಗತಿಕ ಭವಿಷ್ಯದ ಸಾಧನವಾಗಿ ಉನ್ನತ ಶಿಕ್ಷಣವನ್ನು ಪುನರ್ ಕಲ್ಪನೆ ಮಾಡೋಣ” ಎಂಬ ವಿಷಯದ ಮೇಲೆ ಅಕ್ಟೋಬರ್ 18ರಿಂದ 21ರ ತನಕ ಕಾಲೇಜಿನ ಎಲ್ಸಿಆರ್ಐ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಫಾ.ಪ್ರವೀಣ್ ಮಾರ್ಟಿಸ್ ಎಸ್ ಜೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,ಈ ಸಮ್ಮೇಳನವು ದೇಶದಾದ್ಯಂತದ ಕ್ರೈಸ್ತ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶೈಕ್ಷಣಿಕ ನಾಯಕರು ಮತ್ತು ಪ್ರತಿನಿಧಿಗಳನ್ನು ಒಟ್ಟುಗೂಡಿಸಿ, ಉನ್ನತ ಶಿಕ್ಷಣದ ಬದಲಾದ ಪ್ರಪಂಚದ ಬಗ್ಗೆ, ಚಿಂತನೆ ಮತ್ತು ಸಂವಾದಕ್ಕೆ ವೇದಿಕೆಯನ್ನು ಒದಗಿಸಿಕೊಡಲಿದೆ ಎಂದರು .

ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ, ಸಿ, ಸುಧಾಕರ್ ನೆರವೇರಿಸಲಿದ್ದಾರೆ .ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಂಯುಕ್ತ ಕಾರ್ಯದರ್ಶಿಗಳಾದ ಆರ್ಮ್ ಸ್ಟ್ರಾಂಗ್ ಪಾಮೇ, ಐಎಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ . ಈ ಸಂದರ್ಭದಲ್ಲಿ ಕಾಲೇಜಿನ ಗಣ್ಯರು ಉಪಸ್ಥಿತರಿರಲಿದ್ದಾರೆ.ಸಭಾಕಾರ್ಯಕ್ರಮದ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ ಉಪನ್ಯಾಸಕರಿಂದ ವಿಷಯ ವಸ್ತುಗಳ ಮಂಡನೆಯ ಭಾಷಣ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಸೇವಿಯರ್ ಬೋರ್ಡ್ ಆಫ್ ಹೈಯರ್ ಎಜುಶೇಷನ್ ಇನ್ ಇಂಡಿಯಾದ ಅಧ್ಯಕ್ಷರಾದ ವಂ. ಡಾ. ಫಾ. ಎಲ್. ಜೋಜಿ ರೆಡ್ಡಿ, SJ , ಸದಸ್ಯರಾದ ವಂ. ಫಾ ಗಿಲ್ಬರ್ಟ್ ಮಸ್ಕರೆನಾಸ್, , ಡಾ. ಸಿಸ್ಟರ್ ದೀಪ್ತಿ, ಚಂದ್ರಕಲಾ ಉಪಸ್ಥಿತರಿದ್ದರು .

