ಮಂಗಳೂರು : ಪ್ರಕ್ರತಿ ಮತ್ತು ಪಶುಗಳ ಸಂರಕ್ಷಣೆ ಹಾಗೂ ಗೋವಿನ ಸಂರಕ್ಷಣೆ ಮತ್ತು ಗೋವಿನ ಪಾವಿತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶ ನಮ್ಮದಾಗಿದೆ. ನಾವು ಗೋವಿನಲ್ಲಿ ಮುಕ್ಕೋಟಿ ದೇವರುಗಳನ್ನು ಕಾಣುತ್ತೇವೆ ಎಂದು ಪುರಾಣದಲ್ಲಿ ಪ್ರಸಿದ್ದಿ ಇದೆ.ಇಂತಹ ಪೂಜನೀಯ ಗೋವಿನ ರಕ್ಷಣೆಯ ಉದ್ದೇಶದಿಂದ 2012ರಲ್ಲಿ ಕಪಿಲ ಗೋ ಪಾರ್ಕ ಗೋಶಾಲೆಯನ್ನು ಮಂಗಳೂರಿನ ಕೆಂಜಾರು ,ಮರವೂರು ಪರಿಸರದಲ್ಲಿ 2 ಗೋವುಗಳಿಂದ ಪ್ರಾರಂಭವಾದ ಕಪಿಲ ಗೋಶಾಲೆಯು ಇಂದು ಸರಿಸುಮಾರು 600 ರಿಂದ 700 ತನಕ ಗೋವುಗಳು ಪಾಲನೆಯಾಗುತ್ತಿದೆ.ಎಂದು ಗೋಶಾಲೆಯ ಸ್ಥಾಪಕರಾದ ಪ್ರಕಾಶ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ಅಕ್ಟೋಬರ್ 22ರಂದು ಗೋಪೂಜೆಯ ದಿನ ಕಪಿಲ ಗೋ ಪಾರ್ಕಿನಲ್ಲಿ ಸನಾತನ ಹಿಂದೂ ಧರ್ಮದ ಪ್ರಕಾರ 108 ಗೋವುಗಳಿಗೆ ಗೋ ಪೂಜಾ ಕಾರ್ಯಕ್ರಮ ಜರಗುತ್ತದೆ. ಅಂದು ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಅಂದು ಶ್ರೀ ಸನ್ನಿಧಿ ಅಯ್ಯಪ್ಪ ಭಕ್ತವ್ರಂದ ಆಕಾಶಭವನ ಮುಲ್ಲಕಾಡು ಹಾಗೂ ಶಿವನಗರ ಭಜನಾ ಭಕ್ತ ವ್ರಂದ ಕಾವೂರು ಇವರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಾಶ್ ಶೆಟ್ಟಿಯವರು ಹೇಳಿದರು.

ನಂತರ ಮಾತನಾಡಿದ ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಯೆಯ್ಯಾಡಿಯವರು ನಮ್ಮ ಗೋಶಾಲೆಯಲ್ಲಿ ದಿನದಿಂದ ದಿನಕ್ಕೆ ಗೋವುಗಳ ಸಂಖ್ಯೆ ವ್ರದ್ದಿಯಾಗುತ್ತಿದೆ.ಈ ಕಾರಣದಿಂದ ಅವುಗಳಿಗೆ ನಿರಾಳವಾಗಿ ನಡೆದಾಡಲು ಸ್ಥಳದ ಕೊರತೆ ಇದೆ.ಆದ್ದರಿಂದ ನಮ್ಮಲಿರುವ ಜಾಗದಲ್ಲಿ ಇವುಗಳಿಗೆ ಸರಿಯಾಗಿ ನಡೆದಾಡಲು ಉಳಕೊಳ್ಳಲು ಸರಿಸುಮಾರು 50,000 ft ವಿಸ್ತೀರ್ಣದ ಗೋಶಾಲೆಯನ್ನು ನಿರ್ಮಿಸಲು ನಾವು ಯೋಜನೆಯನ್ನು ಹಾಕಿಕೊಂಡಿದ್ದೇವೆ.ಈಯೋಜನೆಯನ್ನು ನಿರ್ಮಿಸಲು ಸರಿಸುಮಾರು 4 ಕೋಟಿ ರೂ ಖರ್ಚು ವೆಚ್ಚ ತಗಲುವುದು. ಅದರ ನೀಲಿನಕ್ಷೆಯನ್ನು ಕೂಡಾ ತಯಾರು ಮಾಡಿಕೊಂಡಿದ್ದೇವೆ.ಈ ಪುಣ್ಯ ಕಾರ್ಯಕ್ಕೆ ಉದಾರ ದಾನಿಗಳು ನಮಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಸಹಕಾರವನ್ನು ನೀಡಬೇಕೆಂದು ವಿನಂತಿಸಿದ್ದಾರೆ.




ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಕುಮಾರ್ ಕೆ.ಸಿ, ರವಿ ಕಾವೂರು,ಸಂತೋಷ್ ಉಪಸ್ಥಿತರಿದ್ದರು

