ಧಾರವಾಡ : ಅಮ್ಮಿನಬಾವಿ ಗ್ರಾಮದ ಯುವ ಛಾಯಾಚಿತ್ರ ಗ್ರಾಹಕ ನಂದೀಶಕುಮಾರ ಗು. ಯರಗಂಬಳಿಮಠ ಅವರಿಗೆ ಶ್ರೇಷ್ಠ ಗುಣಮಟ್ಟದ ಫೋಟೋಗ್ರಾಫೀ ಕ್ಷೇತ್ರದ ವ್ಯವಹಾರ ಸಾಧನೆಗಾಗಿ ಬೆಂಗಳೂರಿನ ನಾರಾ ಮೀಡಿಯಾ ಇವೆಂಟ್ಸ್ ಸಂಸ್ಥೆ ಕೊಡಮಾಡುವ 2025ನೆಯ ಸಾಲಿನ ‘ಕರ್ನಾಟಕ ವ್ಯವಹಾರ ಸಾಧಕ ಪ್ರಶಸ್ತಿ’ ಲಭಿಸಿದೆ.

ಬೆಂಗಳೂರಿನ ಖಾಸಗಿ ಹೊಟೆಲ್ದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ‘ಕೆಜಿಎಫ್’ ಖ್ಯಾತಿಯ ಚಲನಚಿತ್ರ ನಟ ಗರುಡಾ ರಾಮನ್ ನಂದೀಶಕುಮಾರ ಗು. ಯರಗಂಬಳಿಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನ ಖ್ಯಾತ ಉದ್ಯಮಿ ರೂಪಾ ಹಾಗೂ ನಾರಾ ಮೀಡಿಯಾ ಇವೆಂಟ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ರಶ್ಮಿ ಎಸ್.ಎ. ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರು ಪಾಲ್ಗೊಂಡಿದ್ದರು.

