ಮಂಗಳೂರು : ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಶ್ರೀಯುತ ಗುರುರಾಜ್ ಭಟ್ ರವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ 33 ಕೋಟಿ ದೇವತೆಗಳ ಅವಾಸಸ್ಥಾನವಾಗಿರುವ ಗೋ- ಮಾತೆಯ ಪೂಜೆಯನ್ನು ಆಚರಿಸಲಾಯಿತು.

ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನು ದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ ಎಂದು ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಹೇಳಿದರು

ಈ ಸಂಧರ್ಭದಲ್ಲಿ ವೇಧಿಕೆಯ ಪ್ರಮುಖರಾದ ಯೋಗೀಶ್ ನಾಯಕ್ , ಸಮರ್ಥ್ ಭಟ್, ಸಿತಾರಾ , ರಾಧಿಕಾ ನಾಯಕ್ , ನೀತ್ ಶರಣ್ , ರಾಜೇಶ್ ದೇವಾಡಿಗ, ಸುನಿತಾ , ಟಿಸಿ ಗಣೇಶ್ , ಪ್ರಫುಲ್ಲಾ ಕಾಮತ್ , ಸುನಂದಾ ಮಾತಾಜಿ , ರತಿಕಾ ,ರಚಿತಾ ಹಾಗೂ ಮಾತಾಜಿಯರು ಉಪಸ್ಥಿತರಿದ್ದರು.

