ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ 1912ರಲ್ಲಿ ಕುದ್ರೋಳಿಯಲ್ಲಿ ಸ್ಥಾಪನೆಯಾಗಿರುವ ಬಿಲ್ಲವ ಸಮಾಜದ ಅತ್ಯಂತ ಹಿರಿತನದ ಮತ್ತು ಮಾತ್ರ ಸಂಸ್ಥೆಯಾಗಿದೆ.ಸಮಾಜದ ಸಂಘಟನೆಯ ಪ್ರಮುಖ ಉದ್ದೇಶದೊಂದಿಗೆ ಕಾರ್ಯವನ್ನು ಕಳೆದ 113 ವರುಷಗಳಿಂದ ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬಂದಿರುವ ಯೂನಿಯನ್ ಮೂಲಕ ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬುವಂತಹ ಪ್ರಥಮ ಬಿಲ್ಲವ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಹಾಸ್ಟೆಲ್ ಗಳ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಅಭ್ಯುದಯಕ್ಕಾಗಿ ಸೇವೆಗೈದಿರುವ ಯೂನಿಯನ್ ಮೂಲಕ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ ಕಾರ್ಯಕ್ರಮವು ಸರ್ವ ಬಿಲ್ಲವ ಸಂಘಗಳ ಸಹಕಾರದೊಂದಿಗೆ 2026ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ. ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

ಈಗಾಗಲೇ ಬಿಲ್ಲವ ಸಂಘಗಳ ಪ್ರತಿನಿಧಿಗಳ, ಸಮಾಜದ ಪ್ರಮುಖರ ಸಭೆಯು ನಡೆದಿದ್ದು ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಕ್ರೀಡೋತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮವು ಕನ್ನಡದ ಖ್ಯಾತ ನಟ, ಕರುನಾಡ ಚಕ್ರವರ್ತಿ ಬಿರುದಾಂಕಿತ ಡಾ.ಶಿವರಾಜ್ ಕುಮಾರ್ ರವರ ಹಸ್ತದಲ್ಲಿ ಬೆಂಗಳೂರಿನಲ್ಲಿ ನಡೆದಿರುತ್ತದೆ. ಈಗಾಗಲೇ ಕ್ರೀಡೋತ್ಸವದ ಬಗ್ಗೆ ಸಮಾಜದಲ್ಲಿ ವಿಶೇಷ ಉತ್ಸಾಹವು ಮತ್ತು ಸಂಚಲನವು ಸೃಷ್ಟಿಯಾಗಿದೆ.

ಜಿಲ್ಲೆ ಮಾತ್ರವಲ್ಲದೆ ರಾಜ್ಯ ದೇಶ, ವಿದೇಶಗಳಲ್ಲಿ ನೆಲೆಸಿರುವ ಸಮಾಜ ಭಾಂಧವರು, ಸಂಘಗಳು ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ಬಹಳ ಸಕರಾತ್ಮಕವಾಗಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ ಎಂದರು.
ಕ್ರೀಡೋತ್ಸವದಲ್ಲಿ ಸಮಾಜದ ಭಾಂಧವರಿಗಾಗಿ ಪುರುಷರಿಗೆ ಕಬ್ಬಡ್ಡಿ ಮತ್ತು ವಾಲಿಬಾಲ್ ,ಮಹಿಳೆಯರಿಗೆ ಕಬ್ಬಡಿ ಮತ್ತು ತ್ರೋಬಾಲ್ ಪಂದ್ಯಾಟವು ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಸಮಾಜದ ತಂಡಗಳು ತಮ್ಮ ಹೆಸರನ್ನು ಅಕ್ಟೋಬರ್ 27 ರಿಂದ ನವೆಂಬರ್ 30 ರ ಒಳಗೆ Online ನಲ್ಲಿ ನಿಯಮ, ನಿಬಂಧನೆಗಳಿಗೆ ಅನುಸಾರವಾಗಿ ನೋಂದಾಯಿಸತಕ್ಕದ್ದು- Online link https://forms.gle/BsX3quE8YAx1Xvmz5
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9242783800ರನ್ನು ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ

ಪುರುಷರ ಕಬ್ಬಡ್ಡಿಯಲ್ಲಿ ಮೊದಲು ನೋಂದಾಯಿಸಿದ 24, ವಾಲಿಬಾಲ್ ನಲ್ಲಿ 16, ಮಹಿಳೆಯರ ಕಬ್ಬಡ್ಡಿ ಯಲ್ಲಿ 16, ತ್ರೋಬಾಲ್ ನಲ್ಲಿ 16 ತಂಡಗಳಿಗೆ ಭಾಗವಹಿಸಲು ಮಾತ್ರ ಅವಕಾಶ ವಿರುತ್ತದೆ.
ವಿಜೇತ ತಂಡಗಳಲ್ಲಿ ಪುರುಷರ ಕಬ್ಬಡ್ಡಿಯಲ್ಲಿ ಪ್ರಥಮ: 2 ಲಕ್ಷ ರೂಪಾಯಿ ನಗದು ಮತ್ತು ಟ್ರೋಫಿ, ದ್ವಿತೀಯ: 1 ಲಕ್ಷ ರೂಪಾಯಿ ಮತ್ತು ಟ್ರೋಫಿ, ತೃತೀಯ: 50 ಸಾವಿರ ಮತ್ತು ಟ್ರೋಫಿ ಚತುರ್ಥ 25 ಸಾವಿರ ಮತ್ತು ಟ್ರೋಫಿ, ಮಹಿಳಾ ಕಬ್ಬಡ್ಡಿ, ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಗೆ ಅನುಕ್ರಮವಾಗಿ ಪ್ರಥಮ: 1 ಲಕ್ಷ ರೂಪಾಯಿ ಮತ್ತು ಟೋಫಿ, ದ್ವಿತೀಯ: 50 ಸಾವಿರ ರೂಪಾಯಿ ಮತ್ತು ಟ್ರೋಫಿ, ತೃತೀಯ: 25 ಸಾವಿರ ಮತ್ತು ಟ್ರೋಫಿ, ಚತುರ್ಥ: 10 ಸಾವಿರ ರೂಪಾಯಿ ಮತ್ತು ಟ್ರೋಫಿ ಮತ್ತು ವೈಯಕ್ತಿಕ ಸಾಧನೆಗಳಿಗೆ ಬಹುಮಾನವನ್ನು ನೀಡಲಾಗುವುದು.

ಪತ್ರಿಕಾ ಗೋಷ್ಠಿಯಲ್ಲಿ – ಶ್ರೀ. ಲೋಕನಾಥ್ ಅಮೀನ್ (ಉಪಾಧ್ಯಕ್ಷರು) ಶ್ರೀ.ಕೆ.ಟಿ.ಸುವರ್ಣ (ಉಪಾಧ್ಯಕ್ಷರು)
ಶ್ರೀ. ಜೀವನ್ ಕುಮಾರ್ ತೊಕ್ಕೊಟು (ಪ್ರಧಾನ ಕಾರ್ಯದರ್ಶಿ) ಶ್ರೀ. ಸದಾನಂದ ಪೂಜಾರಿ (ಕ್ರೀಡಾ ಪ್ರಧಾನ ಸಂಚಾಲಕರು) ಶ್ರೀ. ಜಯಪ್ರಕಾಶ್ (ಕ್ರೀಡಾ ಕೋಶಾಧಿಕಾರಿ) ಶ್ರೀಮತಿ ಸುಮಲತಾ ಎನ್.ಸುವರ್ಣ (ಮಹಿಳಾ ಸಂಘದ ಅಧ್ಯಕ್ಷರು) ಉಪಸ್ಥಿತರಿದ್ದರು

