ಕಿನ್ನಿಗೋಳಿ : ಶ್ರೀ ಕಟೀಲಿನ ಏಳನೆಯ ಮೇಳದ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಸಮಾಲೋಚನೆ ಸಭೆಯಲ್ಲಿ 7ನೇ ಮೇಳದ ಪ್ರಾರಂಭೋತ್ಸವದ ಸ್ಟೀಕರ್ ಬಿಡುಗಡೆಯು ಕಟೀಲಿನ ಆನುವಂಶಿಕ ಅರ್ಚಕರಾದ ಶ್ರೀ ವೆಂಕಟರಮಣ ಆಸ್ರಣ್ಣರು, ಶ್ರೀ ಅನಂತ ಆಸ್ರಣ್ಣರು , ಶ್ರೀ ಶ್ರೀ ಹರಿ ನಾರಾಯಣ ದಾಸ ಆಸಣ್ಣರಿಂದ, ಮೇಳದ ಯಜಮಾನರಾದ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ ಹಾಗೂ ಊರ ಅನೇಕ ಗಣ್ಯರ ಸಮಕ್ಷ ಬಿಡುಗಡೆಗೊಳಿಸಲಾಯಿತು.


