ಕಾಸರಗೋಡು: ಕುಂಬಳೆ ಬಳಿಯ ಅನಂತಪುರಂ ಕೈಗಾರಿಕಾ ಎಸ್ಟೇಟ್ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕ ಸಾವನ್ನಪ್ಪಿದ್ದು,10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮೃತರನ್ನು ಅಸ್ಸಾಂ ಮೂಲದವರೆಂದು ಎಂದು ಗುರುತಿಸಲಾಗಿದೆ.
ಗಾಯಾಳುಗಳಲ್ಲಿ ಏಳು ಮಂದಿಯನ್ನು ಉಪ್ಪಳದ ಡಾಕ್ಟರ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲದೆ ಗಂಭೀರ ಗಾಯಾಳುಗಳನ್ನು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ಡಾಕ್ಟರ್ಸ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 300 ಕಾರ್ಮಿಕರು ಕೆಲಸ ಮಾಡುತ್ತಿರುವ ಡೆಕೋರ್ ಪ್ಯಾನಲ್ ಪ್ಲೈವುಡ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಬಹುತೇಕ ಎಲ್ಲರೂ ಹೊರ ರಾಜ್ಯದ ಕಾರ್ಮಿಕರು ಎಂದು ಎಸ್ಟೇಟ್ ಮೇಲ್ವಿಚಾರಣೆ ಮಾಡುವ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಕೆ. ಸಜಿತ್ ಹೇಳಿದ್ದಾರೆ.
ಎರ್ನಾಕುಲಂ ಪೆರುಂಬವೂರು ಮೂಲದ ಪೊಲ್ಲಿ ಒಡೆತನದ ಈ ಕಾರ್ಖಾನೆಯು ಕುಂಬಳೆಯ ಅನಂತಪುರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಂಜೆ 6.45 ರ ಶಿಫ್ಟ್ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಸ್ಫೋಟ ಸಂಭವಿಸಿದೆ. ಆ ಸಮಯದಲ್ಲಿ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರು ಕರ್ತವ್ಯದಲ್ಲಿದ್ದರು” ಎಂದು ಸಜಿತ್ ಹೇಳಿದರು.
ಸಂಜೆ 7.10 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಪುತ್ತಿಗೆ ಗ್ರಾಮ ಪಂಚಾಯತ್ನ ಕಣ್ಣೂರು ವಾರ್ಡ್ನಲ್ಲಿರುವ ಕೈಗಾರಿಕಾ ಎಸ್ಟೇಟ್ ಪ್ರಸಿದ್ಧ ಅನಂತಪುರಂ ಸರೋವರ ದೇವಾಲಯದಿಂದ ಕೇವಲ 500 ಮೀಟರ್ ದೂರದಲ್ಲಿದೆ . “ಜೋರಾದ ಸ್ಫೋಟದ ಶಬ್ದ ಕೇಳಿ ನಾವು ಹೊರಗೆ ಓಡಿ ಬಂದೆವು. 300 ಮೀಟರ್ ವ್ಯಾಪ್ತಿಯೊಳಗಿನ ಮನೆಗಳ ಕಿಟಕಿಗಳು ಮತ್ತು ಬಾಗಿಲುಗಳು ಹಾನಿಗೊಳಗಾದವು ಮತ್ತು ಶಬ್ದವು ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಕೇಳಿಬಂತು” ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

