ಮಂಗಳೂರು : ಅಭಿವೃದ್ಧಿಯ ಪಥಕ್ಕೆ ಕಟ್ಟದ ನಿರ್ಮಾಣ ಕ್ಷೇತ್ರವು ತನ್ನದೇ ಆದ ಕೊಡುಗೆಯನ್ನುನೀಡುತ್ತಾ ಬಂದಿದೆ . ಆದರೆ ಕಳೆದ ೪ ತಿಂಗಳಿಂದ ತಲೆದೋರಿದ ಕೆಂಪು ಕಲ್ಲಿನ ಅಭಾವವನ್ನು ಸರ್ಕಾರ ನಿವಾರಿಸಿದೆ . ಆದರೆ ಕೆಂಪುಕಲ್ಲಿನ ಪೂರೈಕೆದಾರರು ಹಿಂದಿಗಿಂತ ಹೆಚ್ಚಿನ ದುಪ್ಪಟ್ಟು ದರವನ್ನು ಪಡೆಯುತ್ತಿದ್ದು ಇದರಿಂದ ಗುತ್ತಿಗೆದಾರರಾದ ನಮಗೆ ನಾವು ನಿರ್ಧಿಷ್ಟ ಮೊತ್ತಕ್ಕೆ ಒಪ್ಪಿಕೊಂಡ ಕಟ್ಟಡ ಒಳಗಾಗುವ ಭೀತಿಯನ್ನು ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗದೆ ನಷ್ಟವನ್ನು ಅನುಭವಿಸುತ್ತಿದ್ದೇವೆ ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮಂಗಳೂರು ಇದರ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸರಕಾರವು ಹಲವು ಉನ್ನತ ಅಧಿಕಾರಿಗಳು ಸಭೆಗಳನ್ನು ನಡೆಸಿ ನಿರ್ಧಾರಗಳನ್ನು ಜನಪರವಾಗಿ ತೆಗೆದುಕೊಂಡು ಕಾನೂನಿನಲ್ಲಿ ತಿದ್ದುಪಡಿಗಳನ್ನು ತಂದು ಕೆಂಪುಕಲ್ಲಿನ ಗಣಿಗಾರಿಕೆ ನಡೆಸಲು ನೀಡುವ ಪರವಾನಿಗೆಯನ್ನು ಸರಳೀಕೃತ ಗೊಳಿಸುವುದಲ್ಲದೆ ರಾಯ ಧನವನ್ನು ಕೂಡಾ ಕಡಿಮೆಗೊಳಿಸಿ ಗಣಿಗಾರಿಕೆ ನಡೆಸಲು ಗಣಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಿರುವ ಬಗ್ಗೆ ನಾವು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಆದರೆ ಕೆಂಪುಕಲ್ಲಿನ ಪೂರೈಕೆದಾರರು ಮೊದಲಿಗಿಂತ ಹೆಚ್ಚಿನ ದುಪ್ಪಟ್ಟು ದರವನ್ನು ಪಡೆಯುತ್ತಿರುವುದರಿಂದ ಗುತ್ತಿಗೆದಾರರಾದ ನಮಗೆ ನಾವು ನಿರ್ಧಿಷ್ಟ ಮೊತ್ತಕ್ಕೆ ಒಪ್ಪಿಕೊಂಡ ಕಟ್ಟಡ ಒಳಗಾಗುವ ಭೀತಿಯನ್ನು ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗದೆ ನಷ್ಟಕ್ಕೆ ಎದುರಿಸುತ್ತಿದ್ದೇವೆ ಅದೂ ಅಲ್ಲದೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆಯ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ಅಲ್ಲದೆ ಈ ರೀತಿಯ ದರದ ವಿಪರೀತ ಹೆಚ್ಚಳವನ್ನು ನಮ್ಮ ಸಂಘವು ಬಲವಾಗಿ ವಿರೋಧಿಸುತ್ತಿದೆ. ಈ ಎಲ್ಲಾ ವಿಚಾರಗಳನ್ನು ಮನಗಂಡು ನಮ್ಮ ಘನ ಸರಕಾರವು ಕೆಂಪುಕಲ್ಲು ಪೂರೈಕೆದಾರರು ಮತ್ತು ಬಳಕೆದಾರರಾದ ನಮ್ಮೆಲ್ಲರ ಸಭೆಯನ್ನು ನಡೆಸಿ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯಯುತವಾದ ದರವನ್ನು ನಿಗದಿಪಡಿಸಿ ಜಿಲ್ಲೆಯ ಸಾಮಾನ್ಯರೆಲ್ಲರಿಗೂ ನ್ಯಾಯ ಒದಗಿಸಿಕೊಡಬೇಕಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ. ಅದಲ್ಲದೆ ಸಿ.ಆರ್.ಝಡ್ ವ್ಯಾಪ್ತಿಯ ಮರಳಿನ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನಕರ್ ಸುವರ್ಣ , ಸತೀಶ್ ಕುಮಾರ್ ಜೋಗಿ, ಸದಸ್ಯರಾದ ಅಶೋಕ್ ಕುಲಾಲ್ , ಸುರೇಶ್ ಕುಮಾರ್ ಜೆಪ್ಪು, ವೆಂಕಟೇಶ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು .

