ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, “ಸಿರಿಧಾನ್ಯ ಆಹಾರ ಹಬ್ಬ ನವೆಂಬರ್ 1 ಮತ್ತು 2, 2025 ರಂದು ಮಂಗಳೂರು ನಗರದ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಮ್ ಜ್ಯೂಬಿಲಿ ಆಡಿಟೋರಿಯಂ, ಸೆಂಟ್ ಆಗ್ನೆಸ್ ಕಾಲೇಜು ಸಮೀಪ, ಬೆಂದೂರ್ವೆಲ್ನಲ್ಲಿ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಉತ್ಸವದ ಸಡಗರದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ನೀಡುವ ಮತ್ತು ಸಿರಿಧಾನ್ಯ ಉತ್ಪಾದನೆ ಮಾಡುವ ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಹಬ್ಬವನ್ನು ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸಿರಿಧಾನ್ಯ ಬೆಳೆಯುವ ರೈತರು. ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸ್ಥಳೀಯ ಉದ್ದಿಮೆದಾರರು ಭಾಗವಹಿಸಲಿದೆ ಎಂದು ತಿಳಿಸಿದರು.

ಮೇಳದ ಮುಖ್ಯ ಆಕರ್ಷಣೆಯಾಗಿ ಸಿರಿಧಾನ್ಯದಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ , ಸಿರಿಧಾನ್ಯ ಆಧಾರಿತ ಗೃಹ ಉತ್ಪನ್ನಗಳ ಸ್ಟಾಲ್ಗಳು , ಪರಿಸರ ಸ್ನೇಹಿ ಉತ್ಪನ್ನಗಳು , ಖಾದಿ ಮತ್ತು ಹಸ್ತಕಲಾ ವಸ್ತುಗಳು ,ರೈತರು ಹಾಗೂ ಸಣ್ಣ ಉದ್ದಿಮೆದಾರರಿಂದ ನೇರ ಮಾರಾಟದ ಆಯ್ಕೆಗಳು ಇರಲಿದೆ ಎಂದು ತಿಳಿಸಿದರು .
ಈ ಕುರಿತು ಹೆಚ್ಚಿನ ಮಾಹಿತಿ ಅಶ್ವಿನ್ ಸ್ವೀಕೇರಾ ನೀಡಿ ,ಈ ಆಹಾರ ಹಬ್ಬವು ಆರೋಗ್ಯ, ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಮಾದರಿಯಾಗಿ ಸ್ಥಳೀಯ ಉತ್ಪಾದಕರಿಗೆ ನೇರ ಬೆಂಬಲ ಒದಗಿಸಲು ಅವಕಾಶ ನೀಡುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಥಳೀಯ ರೈತರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಕಾಸ್ ಕೋಟ್ಯಾನ್,ಸೀತಾರಾಮ್, ಜೀವನ್ ಪಿಂಟೋ, ಸುಧಾ ಪ್ರಹ್ಲಾದ್ ಉಪಸ್ಥಿತರಿದ್ದರು .

