ಮಂಗಳೂರು : ಸ್ವೀಕರ್ ಯುಟಿ ಖಾದರ್ ಮೇಲೆ ವಿದ್ಯಾವಂತ ಶಾಸಕರೆಂದು ಕರೆಸಿಕೊಳ್ಳುವ ಶಾಸಕ ಭರತ್ ಶೆಟ್ಟಿ ಮಾಡಿದ ಭ್ರಷ್ಟಾಚಾರದ ಅಪವಾದನೇ ಸರಿಯಲ್ಲ , ಇದು ಸಭಾಧ್ಯಕ್ಷರ ಸ್ಥಾನಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ದ.ಕ ಜಿಲ್ಲಾ ವಕ್ತಾರ ಎ ಸಿ ವಿನಯರಾಜ್ ಮಂಗಳೂರಿನ ಉತ್ತರ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಹೇಳಿಕೆಯನ್ನು ಖಂಡಿಸಿದರು .
ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಾದರ್ ಅವರು 5 ಬಾರಿ ಶಾಸಕರಾಗಿ ಆಯ್ಕೆ ಆಗಿ ವಿವಿಧ ಇಲಾಖೆಗಳಲ್ಲಿ ದಕ್ಷವಾಗಿ ಕರ್ತವ್ಯವನ್ನು ನಿಭಾಯಿಸಿ ಸಮರ್ಥ ಮಂತ್ರಿಯೆಂದು ಕರೆಸಿಕೊಂಡವರು .ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರು ಸಭಾಪತಿಗಳ ಸ್ಥಾನವನ್ನು ಅಲಂಕರಿಸಿದ್ದರು ಆದರೆ ಅವರ ಮೇಲೆ ಈಗ ಮಾಡುತ್ತಿರುವ ಆಪಾದನೆ ಸರಿಯಲ್ಲ .

ಖಾದರ್ ಅವರು ಶಾಸಕರ ಅಭಿವೃದ್ಧಿ ಮತ್ತು ಅವರ ಕ್ಷೇಮಕ್ಕಾಗಿ ಶ್ರಮಿಸುವವರು .ಅವರಿಗೆ ಬೇಕಾದ ಮೂಲ ಸೌಲಭ್ಯವನ್ನು ಒದಗಿಸಿದ್ದಾರೆ.ಹಳೆಯ ಅಗತ್ಯವಾದ ವಸ್ತುವನ್ನು ಬದಲಾಯಿಸಿ ಹೊಸ ಸೌಲಭ್ಯವನ್ನು ನೀಡಿದ್ದಾರೆ .ಈ ಸೌಲಭ್ಯಗಳನ್ನು ಅನುಭವಿಸುವಾಗ ಮಾತನಾಡದ ಇವರು ಇಂದು ರಾಜಕೀಯ ಲಾಭಕ್ಕಾಗಿ ಮತ್ತು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಾ ಇದ್ದಾರೆ .
ಕೋವಿಡ್ ಸಮಯಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿ ಇತ್ತು ಆ ಸಮಯದಲ್ಲಿ ಕಿಟ್ ,ವೆಂಟಿಲೇಟರ್ ,ಮಾಸ್ಕ್ ಹೀಗೆ ಮುಂತಾದ ವೈದ್ಯಕೀಯ ಸೌಲಭ್ಯವನ್ನು ಖರೀದಿಸಲು ಸುಮಾರು ೭, ೨೦೦ ಕೋಟಿ ಖರ್ಚು ಮಾಡಿತ್ತು ಎಂದು ಹೇಳಿತ್ತು .ಆದರೆ ಜಸ್ಟೀಸ್ ಜಾನ್ ಕುನ್ಹಾ ವರದಿ ಹೊರ ಬಂದ ಕೂಡಲೇ ಇದರ ಸತ್ಯಾಸತ್ಯತೆ ಹೊರ ಬಂದಾಗ . ಇದು ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರ ಎಂಬುದಾಗಿ ತಿಳಿಯಿತು .ಆ ಸಮಯದಲ್ಲಿ ಇದೇ ಮಂತ್ರಿ ಮಂಡಲ ಸಂಪುಟದಲ್ಲಿ ಭರತ್ ಶೆಟ್ಟಿ ಇದ್ದು ಅವರು ಏನೂ ಮಾತಾನಾಡಲೇ ಇಲ್ಲ .

ಸಭಾಧ್ಯಕ್ಷರು ದಕ್ಷವಾಗಿ ಆಡಳಿತವನ್ನು ನಡೆಸಿದ್ದಾರೆ ಅವರ ಹೆಸರನ್ನು ಕೆಡಿಸಲೆಂದೇ ಈ ರೀತಿ ಮಾಡುತ್ತಾ ಇದ್ದಾರೆ. ವಿಧಾನಸೌಧದಲ್ಲಿ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತನ್ನು ಆಡಿದ್ದ ಭರತ್ ಮೇಲೆ ಪ್ರಕರಣ ದಾಖಲಾಗಿತ್ತು ,ಸಭಾ ಕಲಾಪದಿಂದ ಅಮಾನತನ್ನು ಕೊಂಡ ಶಾಸಕ ಎನ್ನುವ ಹಣೆ ಪಟ್ಟಿ ಕೂಡ ಅವರಿಗಿದೆ .ಇದು ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಕಳಂಕವನ್ನೇ ತಂದಿತ್ತು.
ದಕ್ಷಿಣ ಕನ್ನಡದ ಒಬ್ಬ ಶಾಸಕ ದಕ್ಷಿಣ ಕನ್ನಡದ ಇನ್ನೊಂದು ಶಾಸಕರ ಮೇಲೆ ಸುಳ್ಳು ಆಪಾದನೆಯನ್ನು ದಾಖಲೆ ರಹಿತವಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ .ಇವರು ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನು ಆಡ್ತಾ ಇದ್ದಾರೆ . ಭರತ್ ಈಗ ಪ್ರತಿನಿಧಿಸುವ ಕ್ಷೇತ್ರವು ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಹೊಂದಿದೆ ,ಉದ್ಯೋಗ ಅವಕಾಶವನ್ನು ಎಷ್ಟರ ಮಟ್ಟಿಗೆ ನಿರ್ಮಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಅಪ್ಪಿ , ಚಂದ್ರಕಲಾ ಜೋಗಿ , ರೂಪ ಚೇತನ್ , ಅನಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು .

