ಬೆಂಗಳೂರು : 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು,ಬಹುಭಾಷಾ ನಟ ಪ್ರಕಾಶ್ ರಾಜ್ ,ಮಂಗಳೂರಿನ ಅನಿವಾಸಿ ಕನ್ನಡಿಗ ಝಕಾರಿಯ ಜೋಕಟ್ಟೆ ಸೇರಿದಂತೆ ವಿವಿಧ ಕ್ಷೇತ್ರದ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯು 5 ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಬಿಡುಗಡೆ ಮಾಡಿದರು. ಸಾಹಿತ್ಯ, ಸಂಗೀತ, ಜಾನಪದ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ 70 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದರು.
ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ.ಇನ್ನು ಈ ಬಾರಿ 12 ಮಂದಿ ಮಹಿಳೆಯರಿಗೆ ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವಂಬರ್ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅಲ್ಲದೆ ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಹನೀಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ :
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
ಎಂ. ತೋಪಣ್ಣ-ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
ಸಿಂಧು ಗುಜರನ್ದ-ಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ-ಮೈಸೂರು
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್- ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್- ಕೊಡಗು
ಹೊರನಾಡು/ ಹೊರದೇಶ:
ಝಕಾರಿಯ ಜೋಕಟ್ಟೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ)
ಪರಿಸರ:
ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ
ಕೃಷಿ:
ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ, ಎಂ ಸಿ ರಂಗಸ್ವಾಮಿ-ಹಾಸನ.
ಮಾಧ್ಯಮ:
ಕೆ.ಸುಬ್ರಮಣ್ಯ-ಬೆಂಗಳೂರು, ಅಂಶಿ ಪ್ರಸನ್ನಕುಮಾರ್-ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ.
ವಿಜ್ಞಾನ ಮತ್ತು ತಂತ್ರಜ್ಞಾನ :
ರಾಮಯ್ಯ ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ-ದಾವಣಗೆರೆ, ಡಾ. ಆರ್. ವಿ ನಾಡಗೌಡ- ಗದಗ.
ಸಹಕಾರ:
ಶೇಖರಗೌಡ ವಿ ಮಾಲಿಪಾಟೀಲ್ -ಕೊಪ್ಪಳ.
ಯಕ್ಷಗಾನ:
ಕೋಟ ಸುರೇಶ ಬಂಗೇರ- ಉಡುಪಿ , ಐರಬೈಲ್ ಆನಂದ ಶೆಟ್ಟಿ ಉಡುಪಿ, ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ.
ಬಯಲಾಟ: ಗುಂಡೂರಾಜ್-ಹಾಸನ
ರಂಗಭೂಮಿ:
ಹೆಚ್.ಎಂ. ಪರಮಶಿವಯ್ಯ,ಬೆಂಗಳೂರು ದಕ್ಷಿಣ (ರಾಮನಗರ), ಎಲ್.ಬಿ.ಶೇಖ್ (ಮಾಸ್ತರ್)-ವಿಜಯಪುರ, ಬಂಗಾರಪ್ಪ ಖುದಾನ್ಪುರ-ಬೆಂಗಳೂರು, ಮೈಮ್ ರಮೇಶ್- ದಕ್ಷಿಣ ಕನ್ನಡ, ಡಿ.ರತ್ನಮ್ಮ ದೇಸಾಯಿ- ರಾಯಚೂರು.
ಕ್ರೀಡೆ:
ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು, ಎಂ ಯೋಗೇಂದ್ರ-ಮೈಸೂರು, ಡಾ. ಬಬಿನಾ ಎನ್.ಎಂ (ಯೋಗ)ಕೊಡಗು.
ಶಿಕ್ಷಣ:
ಡಾ. ಎಂ.ಆರ್. ಜಯರಾಮ್-ಬೆಂಗಳೂರು, ಡಾ. ಎನ್ ಎಸ್ ರಾಮೇಗೌಡ-ಮೈಸೂರು , ಎಸ್. ಬಿ. ಹೊಸಮನಿ- ಕಲಬುರಗಿ, ರಾಜ್ ಶ್ರೀ ನಾಗರಾಜು- ಬೆಳಗಾವಿ.
ನ್ಯಾಯಾಂಗ:
ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ )-ಬಾಗಲಕೋಟೆ.
ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ, ನಾಗಲಿಂಗಪ್ಪ ಜಿ ಗಂಗೂರ- ಬಾಗಲಕೋಟೆ.
ಚಿತ್ರಕಲೆ: ಬಿ. ಮಾರುತಿ-ವಿಜಯನಗರ
ಕರಕುಶಲ: ಎಲ್. ಹೇಮಾಶೇಖರ್-ಮೈಸೂರು
ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ : ಆಲಮ್ಮ ಮಾರಣ್ಣ ತುಮಕೂರು
ಡಾ. ಜಯರಂಗನಾಥ್- ಬೆಂಗಳೂರು ಗ್ರಾಮಾಂತರ
ಸಂಗೀತ: ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ-ಬೀದರ್
ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
ಫಕ್ಕೀರಿ-ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
ಕೋಣಂದೂರು ಲಿಂಗಪ್ಪ-ಶಿವಮೊಗ್ಗ
ಸಂಕೀರ್ಣ:
ಉಮೇಶ ಪಂಬದ -ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಕೆ.ದಿನೇಶ್- ಬೆಂಗಳೂರು
ಶಾಂತರಾಜು -ತುಮಕೂರು
ಜಾಫರ್ ಮೊಹಿಯುದ್ದೀನ್- ರಾಯಚೂರು
ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

