ಮಂಗಳೂರು : ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ಮಂಗಳೂರು ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮವು ನವೆಂಬರ್ 2 ರಂದು ಸಂಜೆ 4.00 ಗಂಟೆಗೆ ನಗರದ “ ಕುದ್ಮಲ್ ರಂಗರಾವ್ ಪುರಭವನ” ಮಂಗಳೂರು ಇಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಂಗಳೂರು ಮಹಾನಗರದಲ್ಲಿ ಆಟೋರಿಕ್ಷಾ ಮತ್ತು ಕಾರು ಚಾಲಕರ ಹಳೆ ವಾಹನಗಳಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಸಿಗದ ಸಂದರ್ಭದಲ್ಲಿ ಫಾ .ಫ್ರೆಡ್.ವಿ ಪಿರೇರಾ ಈ ಸಂಘವನ್ನು ಸ್ಥಾಪಿಸಿದರು.ಇದೀಗ ಈ ಸಂಸ್ಥೆಯು ನಗರದ ಶೇಕಡಾ 50% ರಷ್ಟು ರಿಕ್ಷಾ ಮತ್ತು ಕಾರು ಚಾಲಕರಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರ ಅಭ್ಯುದಯಕ್ಕಾಗಿ ಸತತವಾಗಿ ಕೆಲಸವನ್ನು ಮಾಡಿಕೊಂಡು ಬಂದಿದೆ.
ಕಾರು ಮತ್ತು ರಿಕ್ಷಾ ಚಾಲಕರ ಸಂಘವನ್ನು ಸ್ಥಾಪನೆ ಮಾಡಿ ಇದೀಗ 50 ವರ್ಷ ಪೂರ್ತಿಗೊಂಡಿದೆ .ಕಳೆದ ವರ್ಷಗಳಲ್ಲಿ ರಿಕ್ಷಾ ಚಾಲಕರಿಗೆ ಮತ್ತು ಅವರ ಕುಟುಂಬದ ಸದಸ್ಯರ ಅಭ್ಯುದಯಕ್ಕೆ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ಬಂದಿದೆ .ಸಂಘದ ಮಹಾಸಭೆಯ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ಸ್ಕಾಲರ್ ಶಿಪ್, ಸದಸ್ಯರಿಗೆ ಅರೋಗ್ಯ ತಪಾಸಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ ಎಂದು ತಿಳಿಸಿದರು.

ಶೇಕಡಾ 80 ರಷ್ಟು ಆಟೋರಿಕ್ಷಾ ಮತ್ತು ಕಾರು ಚಾಲಕರ ಸದಸ್ಯರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುವ ಮೂಲಕ ಮತ್ತು ತಮ್ಮ ಮಕ್ಕಳು ವೈದ್ಯಕೀಯ, ಇಂಜೀನಿಯರಿಂಗ್ ಮತ್ತು ಇನ್ನಿತರ ಪ್ರೋಫೆಶನಲ್ ಕೋರ್ಸ್ ಮುಖಾಂತರ ಉನ್ನತಿಯನ್ನು ಸಾಧಿಸಿರುತ್ತಾರೆ ಎಂದರು.
ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಮುಂಜಾನೆ 9.30 ರಿಂದ ಸದಸ್ಯರುಗಳಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಅಮೆಚೂರು ಕಬ್ಬಡಿ ಅಸೋಸಿಯೇಷನ್ ಇದರ ಅಧ್ಯಕ್ಷರಾದ ರಾಕೇಶ್ ಮಲ್ಲಿ, ನೇರವೇರಿಸಲಿರುವರು.ಟೌನ್ ಹಾಲ್ ಆವರಣದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ ಮತ್ತು ಅನೇಕ ಕ್ರೀಡಾ ಪಂದ್ಯಾಟಗಳು ನಡೆಯಲಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಗೆ ನೃತ್ಯ ಸ್ಪರ್ಧೆಯು ನಡೆಯಲಿದ್ದು ಅದಕ್ಕೆ ನೋಂದಣಿಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು .ಸಂಜೆ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಯುಟಿ ಖಾದರ್ , ಸಹಕಾರ ಸಂಘದ ದಿಗ್ಗಜ ಡಾ|ರಾಜೇಂದ್ರ ಕುಮಾರ್ ಸಹಿತ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು,ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸದ ನೂತನ ಲೋಗೋವನ್ನು ಅನಾವರಣ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಸಿರಿಲ್ ಡಿಸೋಜ, ಬಬಿತ ಡಿಸೋಜ, ಭಾಸ್ಕರ್ ರಾವ್ , ವಸಂತ್ ಶೆಟ್ಟಿ ಮುಂತಾದವರು ಉಪಸ್ಥಿತತರಿದ್ದರು .

