ಮಂಗಳೂರು : ವಿಧಾನಸೌಧ ಮತ್ತು ಶಾಸಕರ ಭವನದ ನವೀಕರಣ ಮತ್ತು ಸೌಂದರ್ಯೀಕರಣಕ್ಕಾಗಿ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಾಲಿ ಸ್ಪೀಕರ್ ಯು.ಟಿ. ಖಾದರ್
ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪವು ಆಧಾರ ರಹಿತ ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಗುಡುಗಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,ಸ್ಪೀಕರ್ ಆಗಿದ್ದ ಸಮಯದಲ್ಲಿ ಕಾಗೇರಿ ಮಾಡಿರುವ ಆರೋಪಗಳು ಅವರ ದಡ್ಡತನವನ್ನು ಎತ್ತಿ ತೋರಿಸಿತ್ತು. ಸಭಾಪತಿಯಾಗಿದ್ದಾಗ ಅವರು ಅಜ್ಞಾನಿಯಾಗಿ ವ್ಯವಹರಿಸುತ್ತಿದದ್ದು ನನಗೆ ಗೊತ್ತು .ಅದನ್ನು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದರು .ಅವರು ಸ್ಪೀಕರ್ ಕಚೇರಿಯನ್ನು ಸಂಪರ್ಕಿಸದೆ ಮತ್ತು ಕಾನೂನಿನ ಲಭ್ಯ ಆಂತರಿಕ ಪರಿಹಾರಗಳನ್ನು ಬಳಸಿಕೊಳ್ಳದೆ ಮಾಧ್ಯಮಗಳ ಮುಂದೆ ಸುಳ್ಳು ಆರೋಪಗಳನ್ನು ಮಾಡುವಷ್ಟು ಅಜ್ಞಾನಿಯಾಗಿದ್ದಾರೆ ಎಂದರು.
ರಾಜಕೀಯ ನಾಯಕರೊಬ್ಬರು ಸ್ಪೀಕರ್ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪ ಮಾಡಿದ್ದು ಅಲ್ಲದೆ ಸಭಾಪತಿ ಸ್ಥಾನಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಇದು ರಾಜ್ಯದ ನಾಗರಿಕರಿಗೆ ಮತ್ತು ಎಲ್ಲಾ 224 ಶಾಸಕರಿಗೆ ಮತ್ತು ೭೫ ವಿಧಾನ ಪರಿಷತ್ ಶಾಸಕರಿಗೆ ಮಾಡಿದ ಅವಮಾನವೇ ಸರಿ ಎಂದು ಅವರು ಹೇಳಿದರು .
ಸ್ಪೀಕರ್ ಅವರ ಮೇಲೆ ಹಾಕಿದ ಸುಳ್ಳು ಆರೋಪದಿಂದ ಅವರ ವರ್ಚಸ್ಸು ಕುಗ್ಗಿದೆ . ಅವರ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗುವುದೆಂದು ತಿಳಿಸಿ
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡರಾದ ಭಾಸ್ಕರ್ ರಾವ್ , ವಸಂತ್ ಶೆಟ್ಟಿ , ಪ್ರಮೋದ್ ಮುಂತಾದವರು ಸಹಿತ ಉಪಸ್ಥಿತತರಿದ್ದರು .

