ಕಾಸರಗೋಡು : ಉಪ್ಪಳದಲ್ಲಿ ಮಂಗಳೂರು ಮೂಲದ ರೌಡಿಶೀಟರ್, ಜೋಡಿ ಕೊಲೆ ಆರೋಪಿ ತುಕ್ಕ ನೌಫಲ್ ಯಾನೆ ನೌಫಲ್ ಬಜಾಲ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ನೌಫಲ್ ಬಜಾಲ್ ಮಂಗಳೂರಿನ ಫೈಝಲ್ ನಗರ ನಿವಾಸಿಯಾಗಿದ್ದು,ಹಲವಾರು ಅಪರಾಧ ಕ್ರತ್ಯಗಳಲ್ಲಿ ಭಾಗಿಯಾಗಿದ್ದ ಈತನನ್ನು ಉಪ್ಪಳ ರೈಲ್ವೆ ಗೇಟ್ ಬಳಿ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತನ ಮೃತದೇಹವನ್ನು ಕಾಸರಗೋಡಿನ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

