ದುಬೈ : ಕನ್ನಡಿಗರ ಕೂಟ ದುಬೈ ಯುಎಇ ಮತ್ತು ಗಲ್ಫ್ ಕನ್ನಡ ಮೂವೀಸ್ ಜಂಟಿಯಾಗಿ ಆಯೋಜಿಸಿರುವ “ಕರ್ನಾಟಕ ರಾಜ್ಯೋತ್ಸವ -2025” ಕಾರ್ಯಕ್ರಮವು ನವೆಂಬರ್ 8 ರಂದು ಸಂಜೆ 4:30 ರಿಂದ ಕೀಸಸ್ ನಲ್ಲಿರುವ ಜೆಮ್ಸ್ ಕೇಂಬ್ರಿಡ್ಜ್ ಅಂತಾರಾಷ್ಟ್ರೀಯ ಶಾಲೆಯ, ಸಭಾಂಗಣದಲ್ಲಿ ನಡೆಯಲಿದೆ.
ಅಂದು ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು Zee ಕನ್ನಡ ಕಾಮಿಡಿ ಕಿಲಾಡಿಗಳು ತಂಡದವರಿಂದ ಹಾಸ್ಯ ಮನೋರಂಜನೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

” ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2025″ಯನ್ನು ಖ್ಯಾತ ಚಲನಚಿತ್ರ ನಟರಾದ ಡಾ.ಶಿವರಾಜ್ ಕುಮಾರ್, “ಕನ್ನಡದ ಕಣ್ಮಣಿ ಪ್ರಶಸ್ತಿ -2025” ಯನ್ನು ಖ್ಯಾತ ಚಲನಚಿತ್ರ ನಟಿ ರಮ್ಯಾ ಮತ್ತು “ಅಂತಾರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ -2025″ಯನ್ನು ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ನೀಡಿ ಗೌರವಿಸಲಾಗುವುದು.

ಅಂದು ನಡೆಯುವ ಈ ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಎಲ್ಲಾ ಕನ್ನಡಿಗರೂ ಭಾಗವಹಿಸಬೇಕು ಹಾಗೂ ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

