ವರ್ಜೀನಿಯಾ ಲೆಫ್ಟಿನೆಂಟ್ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಗಝಲಾ ಹಶ್ಮಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು.ಅವರು ಮೂಲತಃ ಭಾರತೀಯ ಮೂಲದವರಾಗಿದ್ದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೆಮೋಕ್ರಾಟ್ ಪಕ್ಷದ 61 ವರ್ಷದ ಗಜಲಾ ಹಶ್ಮಿ 1,465,634 ಮತಗಳನ್ನು ಗಳಿಸಿದ್ದು, ಅವರ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಜಾನ್ ರೀಡ್ 1,232,242 ಮತಗಳನ್ನು ಪಡೆದಿದ್ದಾರೆ. ಮಂಗಳವಾರ ಚುನಾವಣಾ ದಿನದಂದು ವಿಜಯಶಾಲಿಯಾಗಿ ಹೊರಹೊಮ್ಮಿದ ವರ್ಜೀನಿಯಾ ರಾಜ್ಯ ಸೆನೆಟರ್,
2025 ರ ಚುನಾವಣೆಯಲ್ಲಿ ರಾಷ್ಟ್ರವ್ಯಾಪಿ ಪ್ರಮುಖ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ 30 ಕ್ಕೂ ಹೆಚ್ಚು ಭಾರತೀಯ- ಅಮೆರಿಕನ್ನರು ಮತ್ತು ದಕ್ಷಿಣ ಏಷ್ಯಾದ ಅಭ್ಯರ್ಥಿಗಳಲ್ಲಿ ಒಬ್ಬರು. ಗಜಲಾ ಹಶ್ಮಿ ವರ್ಜೀನಿಯಾದ ರಾಜ್ಯ ಸೆನೆಟ್ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಮತ್ತು ಮೊದಲ ದಕ್ಷಿಣ ಏಷ್ಯಾದ ಅಮೇರಿಕನ್.

ಗಜಲಾ ಜುಲೈ 5, 1964 ರಂದು ಹೈದರಾಬಾದ್ನಲ್ಲಿ ಜನಿಸಿದರು.ಆಕೆ ನಾಲ್ಕು ವರ್ಷದವಳಿದ್ದಾಗ,ತನ್ನ ತಾಯಿ ಮತ್ತು ಅಣ್ಣನೊಂದಿಗೆ ಅಮೆರಿಕಕ್ಕೆ ತೆರಳಿದರು.ಆಕೆಯ ತಂದೆ ಆಗಲೇ ಜಾರ್ಜಿಯಾದಲ್ಲಿದ್ದರು,
ಗಜಲಾ ಹಶ್ಮಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಪಿಎಚ್ಡಿ ಪೂರ್ಣಗೊಳಿಸಿ ವಿಶ್ವವಿದ್ಯಾಲಯವೊಂದರಲ್ಲಿ ಬೋಧಿಸಲು ಪ್ರಾರಂಭಿಸಿದರು. ನಂತರ ಗಜಲಾ ಜಾರ್ಜಿಯಾ ಸದರ್ನ್ ವಿಶ್ವವಿದ್ಯಾಲಯದಿಂದ ಬಿಎ ಗೌರವ ಪದವಿ ಮತ್ತು ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದಿಂದ ಅಮೇರಿಕನ್ ಸಾಹಿತ್ಯದಲ್ಲಿ ಪಿಎಚ್ಡಿ ಪದವಿ ಪಡೆದರು.ಅವರು ಅಜರ್ ರಫೀಕ್ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸಿರಿಯಾ, ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ – ಏಳು ಪ್ರಧಾನ ಮುಸ್ಲಿಂ ರಾಷ್ಟ್ರಗಳ ನಾಗರಿಕರು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ನಂತರ ಗಜಲಾ ಅವರು ಚುನಾವಣೆಗೆ ಸ್ಪರ್ಧಿಸಲು ಸ್ಫೂರ್ತಿ ಪಡೆದರು.

ಬುಧವಾರ ನಡೆದ ವರ್ಜೀನಿಯಾ ಲೆಫ್ಟಿನೆಂಟ್ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಾಟ್ ಗಝಲಾ ಹಶ್ಮಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಭಾರತೀಯ ಮೂಲದ ಮೊದಲ ಮಹಿಳೆ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ, ಗರ್ಭಪಾತ ಮತ್ತು ಗರ್ಭನಿರೋಧಕದಂತಹ ವಿಷಯಗಳಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಬಂದೂಕು ಹಿಂಸಾಚಾರದ ಘಟನೆಗಳನ್ನು ಕಡಿಮೆ ಮಾಡಲು ಶಸ್ತ್ರಾಸ್ತ್ರಗಳ ಬಳಕೆಯ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತರುವುದು ಅವರ ಪ್ರಮುಖ ಉದ್ದೇಶವಾಗಿರುತ್ತದೆ. ಹೆಚ್ಚುವರಿಯಾಗಿ, ಗಝಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತಲೂ ಗಮನಹರಿಸಲಿದ್ದಾರೆ.

