ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ಎರಡು ಕಂಪ್ಯೂಟರ್ ಕೊಡುವ ಮೂಲಕ ಮಾದರಿಯಾಗಿದ್ದಾರೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್ಐಓ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್ಐಓ ಪದಾಧಿಕಾರಿಗಳು ತೆರಳಿ, ಗಿಫ್ಟ್ ಕೊಟ್ಟು ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಅಭಿಯಾನದ ಭಾಗವಾಗಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಗಿತ್ತು.ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಆದಮ್ ಸರ್ ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಿತು, ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ಅವರನ್ನು ಭೇಟಿಯಾಗಿ ಶುಭ ಹಾರೈಸಿದ ಸಂದರ್ಭದಲ್ಲಿ ಎಸ್ಐಓ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಿದ್ದು, ನಮ್ಮಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವಂತಾಗಲೂ ಸಂಘಟನೆ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಎಸ್ಐಓ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ದಾನಿಗಳನ್ನು ಭೇಟಿಯಾಗಿ ಶಾಲೆಗೆ ಎರೆಡು ಕಂಪ್ಯೂಟರ್ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾದರು.

ಇಂದು ಶಾಲೆವತಿಂದ ಹಸ್ತಾಂತರ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಆದಮ್ ಸರ್ ರವರು ಎಸ್ಐಓ ಈ ಸಂಘಟನೆಗೆ ತಾನು ಫಿದಾ ಆಗಿದ್ದೇನೆ . ತಾನು ಕಲಿಸದಿದ್ದರೂ ಶಿಕ್ಷಣ ನೀಡುವ ಎಲ್ಲಾ ಶಿಕ್ಷಕರನ್ನು ಗೌರವಿಸುವ ಒಂದು ಗುಣ ತಾನು ತನ್ನ ಜೀವನದಲ್ಲಿ ಇದುವರೆಗೂ ಅನುಭವ ಆಗಿಲ್ಲ ಮತ್ತು ಹಲವಾರು ದಾನಿಗಳನ್ನು ಭೇಟಿಯಾಗಿ ಒಂದೂವರೆ ತಿಂಗಳೊಳಗೆ ತಾನಿಟ್ಟ ಬೇಡಿಕೆಯನ್ನು ಈಡೇರಿಸಿದ್ದಿರಿ , ಒಂದು ಸಂಘಟನೆಯಲ್ಲಿ ಸೇರಿ ಸಮಾಜಕ್ಕೆ ಪ್ರಯೋಜನ ವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಅದರಲ್ಲೂ ವಿದ್ಯಾರ್ಥಿ ಸಂಘಟನೆಯಾಗಿ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಯಾರಿಗೂ ಸಿಗುವುದಿಲ್ಲ ದೇವನ ಅನುಗ್ರಹ ಸದಾ ಇರಲಿ ಎಂದು ಆಶಿಸಿದರು.
ತದ ನಂತರ ಮಾತನಾಡಿದ ಶ್ರೀಮತಿ ವಿನೋಲ ಸಿವಿಲ್ಯ ಪಿಂಟೊ (ಮುಖ್ಯೋಪಾಧ್ಯಾಯಿನಿ) ರವರು ದೇಶದ ಹಿತಕ್ಕಾಗಿ ನಾಡಿನ ಉದ್ಧಾರಕ್ಕಾಗಿ ವಿದ್ಯಾರ್ಥಿಗಳು, ಯುವಕರು ಇಂತಹ ಗುಣಗಳನ್ನು ಮೈಕುಡಿಸಬೇಕು ಮಕ್ಕಳು ಸಮಾಜವನ್ನು ಅರ್ಥಮಾಡಿ ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದರು.ನಂತರ ಎಸ್ಐಓ ಪಾಣೆಮಂಗಳೂರು ಘಟಕದ ವತಿಯಿಂದ ಕಂಪ್ಯೂಟರ್ SDMC ಅಧ್ಯಕ್ಷರ ನೇತೃತ್ವದಲ್ಲಿ ಶಾಲೆಗೆ ಹಸ್ತಾಂತರ ಮಾಡಲಾಯಿತು.ನಂತರ ಮಾತನಾಡಿದ ಎಸ್ ಐ ಓ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಮುಬಾರಿಶ್. ಸಿ ರವರು ವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ, ಪ್ರೀತಿಯನ್ನು ಹಂಚುವ ಮೂಲಕ ದೇಶ ಸೇವೆಯನ್ನು ಮಾಡಬೇಕು. ಯಾವುದೇ ಧರ್ಮ ಮನುಷ್ಯರನ್ನು ಪ್ರೀತಿಸಲು ಹೇಳಿದೆ ಹೊರತು ದ್ವೇಷಿಸಲು ತಿಳಿಸಿಲ್ಲ , “ಸರ್ವೇ ಜನ ಸುಖಿನೋ ಭವಂತು” ಇದರಲ್ಲಿ ಎಲ್ಲಾ ಮಾನವ ಸಮೂಹಕ್ಕೆ ಸುಖದ ಪ್ರಾರ್ಥನೆ ಇದೆ ಹೊರತು ಅದರಲ್ಲಿ ಬೇರೆ ಬೇರೆ ಧರ್ಮ/ಜಾತಿಗಳನ್ನು ಹೆಸರನ್ನು ಸೂಚಿಸಿಲ್ಲ , ವಿದ್ಯಾರ್ಥಿಗಳು ವಿದ್ಯೆಯನ್ನು ಕೇವಲ ಅಂಕಗಳಿಗೋಸ್ಕರ ಮಾತ್ರ ಪಡೆಯದೇ ಉತ್ತಮ ಶಿಕ್ಷಣ ಪಡೆದು ಶಾಂತಿಯ ಸಹನೆಯ ಪ್ರೀತಿ ವಿಶ್ವಾಸದ ದೇಶ ಕಟ್ಟುವಂತಾಗಬೇಕೆಂದರು.ತಮ್ಮ ಸಂಘಟನೆ ವತಿಯಿಂದ ಮಾಡಿದ ಇಂತಹ ಸೇವೆಗಳಿಗೆ ಪುಣ್ಯ ಸಿಗುವಂತಾಗಲು ತಾವೆಲ್ಲರೂ ತಮ್ಮ ಪ್ರಾರ್ಥನೆಯಲ್ಲಿ ಸೇರಿಸಬೇಕೆಂದು ವಿನಂತಿಸಿಕೊಂಡರು.
ತದ ನಂತರ ಮಾತನಾಡಿದ ಶಾಲೆಯ SDMC ಅಧ್ಯಕ್ಷರ ಶ್ರೀ.ಪುರುಷೋತ್ತಮ ಬಿ ಸಂಘ ಸಂಸ್ಥೆಗಳನ್ನು ಕಟ್ಟುವುದು ದೊಡ್ಡ ವಿಷಯವಲ್ಲ.ಆದರೆ ,ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟ. ನಿಮ್ಮನ್ನು ನೋಡಲು ತುಂಬಾ ಖುಷಿಯಾಗುತ್ತದೆ ಹಾಗೂ ಹೆಮ್ಮೆ ಅನಿಸುತ್ತದೆ ,ಬ್ಯಾಟ್ ಹಿಡಿದುಕೊಂಡು ಆಡುವ ಈ ಸಮಯದಲ್ಲಿ ಒಂದು ಮೂಲೆಯಲ್ಲಿರುವ ಸರಪಾಡಿ ಶಾಲೆಗೆ ಬಂದು ಹಾಗೂ ಇನ್ನಿತರ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳ ತೊಂದರೆಗಳಿಗೆ ಸ್ಪಂದಿಸುವಂತಹಾ ಇಂತಹ ಮನಸ್ಸು ಭಗವಂತ ಎಲ್ಲರಿಗೂ ನೀಡುವುದಿಲ್ಲ ,ತಾವುಗಳು ಪುಣ್ಯವಂತರು , ಇಂತಹ ಜನ ಸ್ನೇಹಿ ಕಾರ್ಯಗಳಿಂದ ನೀವು ಎಂತಹ ಜನರು ಎಂದು ತಿಳಿಯುತ್ತದೆ , ಒಂದು ಒಳ್ಳೆಯ ಬೀಜ ಬಿತ್ತಿದರೆ ಮಾತ್ರ ಒಳ್ಳೆಯ ಫಸಲು ಸಿಗಲು ಸಾದ್ಯ ಅಂದ್ಹಾಗೆ ಇದರಿಂದ ನಿಮ್ಮ ಹೆತ್ತವರು ನಿಮಗೆ ಹೇಗೆ ಜೀವನ ನಡೆಸಬೇಕೆಂದು ಕಲಿಸಿಕೊಟ್ಟಿರುತ್ತಾರೆ ಎಂದು ತಿಳಿಯುತ್ತದೆ,ನಮ್ಮ ವಿದ್ಯಾರ್ಥಿಗಳ ಯಶಸ್ವಿನ ಹಿಂದೆ ನಿಮ್ಮ ಈ ತ್ಯಾಗ ಸದಾ ಜೀವಂತಇರುತ್ತದೆ. ಸರಪಾಡಿ ಎಂಬುದು ದೈವಿಕಶಕ್ತಿಯುಳ್ಳ ಪ್ರದೇಶವಾಗಿದೆ ನಿಮ್ಮ ಇಂತಹ ಸೇವೆಗೆ ಭಗವಂತನ ಮೆಚ್ಚುಗೆ ಇರುತ್ತದೆ , ಅವನು ಖಂಡಿತ ನಿಮ್ಮ ಕೈ ಬಿಡಲಿಕ್ಕಿಲ್ಲ ಎಂದು ಶುಭ ಹಾರೈಸಿದರು .ಕಿಶೋರಿ ಟೀಚರ್ ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ಎಸ್ಐಓ ಸಂಘಟನೆಯ ಜಿಲ್ಲಾಧ್ಯಕ್ಷ ಬ್ರ.ರಿಜ್ವಾನ್ , ಎಸ್ಐಓ ಪಾಣೆಮಂಗಳೂರು ಘಟಕದ ಸದಸ್ಯರಾದ ಬ್ರ ಇಸ್ಮಾಯಿಲ್, ಬ್ರ. ಮುತಹರ್, ಬ್ರ.ಅಫ್ಸಾನ್ ಉಪಸ್ತಿತರಿದ್ದರು

