ಧಾರವಾಡ : ನವದೆಹಲಿಯ ಅಖಿಲ ಭಾರತ ಪ್ರಾಥಮಿಕ ಶಿಕ್ಷಕ ಮಹಾಮಂಡಳ (ಎಐಪಿಟಿಎಫ್) ಸಂಪನ್ಮೂಲ ಘಟಕದ ಮಾಜಿ ಸದಸ್ಯ, ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷ, ಸಂಪನ್ಮೂಲ ಶಿಕ್ಷಕ, ಲೇಖಕ ಮಂಜುನಾಥ ಕೃಷ್ಣ ಹೆಗಡೆ ಹೊಲನಗದ್ದೆ(72) ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಶಿಕ್ಷಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಮಂಜುನಾಥ ಹೆಗಡೆ ಮೂಲತಃ ಕರಾವಳಿ ತೀರದವರಾದರೂ ಬಾಲ್ಯದಿಂದಲೂ ನಗರದಲ್ಲಿಯೇ ಬೆಳೆದಿದ್ದರು. ತಾಯಿ, ಓರ್ವ ಸಹೋದರಿ, ಮಾವ, ಅಳಿಯ ಸೇರಿ ಅಪಾರ ಬಂಧುಗಳನ್ನು ಅಗಲಿದ್ದಾರೆ. ದೇಹದಾನ ಮಾಡಿದ್ದ ಮಂಜುನಾಥ ಹೆಗಡೆ ಅವರ ಇಚ್ಛೆಯಂತೆ ಮೃತದೇಹವನ್ನು ಬೆಂಗಳೂರು ಬನಶಂಕರಿ 2ನೆಯ ಹಂತದ ಕೆಂಪೆಗೌಡ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
ಎ.ಐ.ಪಿ.ಟಿ.ಎಫ್. ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶಂಕರ ಗಂಗಣ್ಣವರ, ಮಲ್ಲಿಕಾರ್ಜುನ ಚಿಕ್ಕಮಠ, ಗುರುಮೂರ್ತಿ ಯರಗಂಬಳಿಮಠ, ಗುರು ತಿಗಡಿ, ಸಿ.ಎಂ.ಕಿತ್ತೂರ, ಗುರು ಪೋಳ, ಶಂಕರ ಘಟ್ಟಿ, ಎಂ.ಎನ್.ಸತ್ತೂರ, ಎಂ.ಜಿ.ಸುಭೇದಾರ, ಎಂ.ಟಿ.ಸುಂಕದ, ಎಚ್.ಎಸ್.ಬಡಿಗೇರ, ಎಸ್.ಎಸ್.ಧನಿಗೊಂಡ, ವ್ಹಿ.ಎನ್.ಮಂಟೂರಮಠ, ಶಾರದಾ ಶಿರಕೋಳ, ಎಲ್.ಐ.ಲಕ್ಕಮ್ಮನವರ, ರೇಖಾ ಜೋಶಿ, ಗಂಗವ್ವ ಕೋಟಿಗೌಡರ, ಫಿರೋಜ ಗುಡೇನಕಟ್ಟಿ, ಸುಮಿತಾ ಹಿರೇಮಠ, ಎಸ್.ಎಂ.ದಾನಪ್ಪಗೌಡರ, ಮಹಾಂತೇಶ ನರೇಗಲ್ಲ ಸೇರಿದಂತೆ ಅನೇಕರು ಮಂಜುನಾಥ ಅಗಲಿಕೆಗೆ ತೀವ್ರ ಶೋಕವ್ಯಕ್ತಪಡಿಸಿದ್ದಾರೆ.
ಸಂತಾಪ ಸೂಚಕ ಸಭೆ : ಜಿಲ್ಲೆಯ ಶಿಕ್ಷಕ ಸಂಘಟನೆಗಳ ವತಿಯಿಂದ ಶುಕ್ರವಾರ (ನ.7 ರಂದು) ಸಂಜೆ 5-30 ಗಂಟೆಗೆ ಜಿಲ್ಲಾ ಸರಕಾರಿ ನೌಕರರ ಸಭಾಭವನದಲ್ಲಿ ಸಂತಾಪ ಸೂಚಕ ಸಭೆ ಜರುಗಲಿದ್ದು, ಶಿಕ್ಷಕ-ಶಿಕ್ಷಕಿಯರು ಪಾಲ್ಗೊಳ್ಳಲು ಕೋರಲಾಗಿದೆ.

