ಮಂಗಳೂರು : ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಅವರ ಸುಪುತ್ರ ಅಭಿಷೇಕ್ ಆಳ್ವ ಅವರ ಮೃತದೇಹ ಹೆಜಮಾಡಿ ಸಮೀಪದ ಶಾಂಭವಿ ನದಿ ಕಿನಾರೆಯಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ.
ಉದ್ಯಮಿ,ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ
ಪ್ರಸ್ತುತ ನೆಲ್ಯಾಡಿಯ ಚರಣ್ ಬಾರ್ & ರೆಸ್ಟೋರೆಂಟ್ ನ್ನು ಲೀಸ್ ಗೆ ಪಡೆದು ನಡೆಸುತ್ತಿದ್ದರು.ಕಳೆದ ಎರಡು ದಿನಗಳಿಂದ ಅವರು ನಾಪತ್ತೆಯಾಗಿದ್ದರು.ಇಂದು ಅವರ ಕಾರು ಮುಲ್ಕಿ ಬಪ್ಪನಾಡು ಬಳಿ ಪತ್ತೆಯಾಗಿದ್ದು ಈ ಬಗ್ಗೆ ಪಡುಬಿದ್ರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು. ಮೇಲ್ನೋಟಕ್ಕೆ ಅಭಿಷೇಕ್ ಆಳ್ವ ಅವರು ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ.ನಿಖರ ಕಾರಣ ಪೋಲಿಸರ ತನಿಖೆಯಿಂದ ತಿಳಿದು ಬರಬೇಕಾಗಿದೆ

