ಆಸ್ಟ್ರೇಲಿಯಾ ಮೂಲದ ಪಂಜಾಬಿ ವೆಬ್ ಚಾನೆಲ್ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಎಎಪಿ ಶಾಸಕ ಹರ್ಮಿತ್ ಸಿಂಗ್ ಪಠಾಣಮಾಜ್ರಾ ಕಾಣಿಸಿ ಕೊಂಡಿದ್ದು, “ಜಾಮೀನು ಸಿಕ್ಕ ನಂತರವೇ ಭಾರತಕ್ಕೆ ಮರಳುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಸೆಪ್ಟೆಂಬರ್ 2 ರಿಂದ ತಲೆಮರೆಸಿಕೊಂಡಿರುವ ಪಂಜಾಬ್ ಎಎಪಿ ಶಾಸಕ ಹರ್ಮಿತ್ ಸಿಂಗ್ ಪಠಾಣಮಜ್ರಾ, ವಿಡಿಯೋ ಸಂದರ್ಶನದಲ್ಲಿ ಕಾಣಿಸಿಕೊಂಡ ನಂತರ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಂದರ್ಶನದಲ್ಲಿ ಪಠಾಣ್ಮಜ್ರಾ ಅವರು “ಜಾಮೀನು ಪಡೆದ ನಂತರವೇ ಭಾರತಕ್ಕೆ ಮರಳುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಎಲ್ಲಾ ಆರೋಪಗಳನ್ನು ನಿರಾಕರಿಸಿದ ಅವರು, ಈ ಪ್ರಕರಣವನ್ನು “ರಾಜಕೀಯ ಪಿತೂರಿ” ಎಂದು ಕರೆದರು, ಇದು ಪಂಜಾಬ್ನ ಜನರ ಪರವಾಗಿ ಮಾತನಾಡುವ ಧ್ವನಿಗಳನ್ನು ಅಡಗಿಸುವ ಗುರಿಯನ್ನು ಹೊಂದಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
“ಪಂಜಾಬ್ನಲ್ಲಿ, ಪ್ರಮುಖ ವಿಷಯಗಳಲ್ಲಿ ಸಚಿವರು ಮತ್ತು ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದಿಲ್ಲ. ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ದೆಹಲಿಯಲ್ಲಿ ಸೋತ ನಂತರ, ಆ ನಾಯಕರು ಈಗ ಪಂಜಾಬ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರು ಅದನ್ನು ಅದೇ ರೀತಿಯಲ್ಲಿ ಹಾಳು ಮಾಡುತ್ತಿದ್ದಾರೆ” ಎಂದು ಅವರು ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸುತ್ತಾ ಆರೋಪಿಸಿದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣಮಜ್ರಾ ಹಾಜರಾಗಲು ವಿಫಲರಾದ ನಂತರ ಪಟಿಯಾಲ ನ್ಯಾಯಾಲಯವು ಈಗಾಗಲೇ ಘೋಷಿತ ಅಪರಾಧಿ ವಿಚಾರಣೆಯನ್ನು ಪ್ರಾರಂಭಿಸಿದೆ.

ಕರ್ನಾಲ್ ಜಿಲ್ಲೆಯ ದಾಬ್ರಿ ಗ್ರಾಮದಲ್ಲಿ ಶಾಸಕರನ್ನು ಬಂಧಿಸಲು ತಂಡವೊಂದು ಹೋದಾಗ, ಅವರ ಬೆಂಬಲಿಗರು ಗುಂಡು ಹಾರಿಸಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಆದರೆ ಪಠಾಣಮಾಜ್ರಾ ಅವರು ಗುಂಡಿನ ದಾಳಿ ಮಾಡಿದ್ದೇವೆಂದು ಪೋಲಿಸರ ಹೇಳಿಕೆಯನ್ನು ನಿರಾಕರಿಸಿದ್ದಾರೆ ಮತ್ತು “ನಕಲಿ ಎನ್ಕೌಂಟರ್”ಮಾಡಿ ತನ್ನನ್ನು ಕೊಲ್ಲುತ್ತಾರೆ ಎಂದು ತಿಳಿದ ನಂತರ ತಾನು ಓಡಿಹೋದೆ ಎಂದು ಹೇಳಿದ್ದರು.
ಸೆಪ್ಟೆಂಬರ್ 1 ರಂದು ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಎಪಿ ಶಾಸಕನ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

