ಮಂಗಳೂರು: ಇಂದು ಡ್ರಗ್ಸ್ ನಮ್ಮ ಮಕ್ಕಳನ್ನು ಭೇಟೆಯಾಡತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕತೆಯಿಂದ ನಿತ್ಯವೂ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಅಂಗವಾಗಿ ನವೆಂಬರ್ 15 ರಂದು ಮಂಗಳೂರಿನ ಪುರಭವನದಲ್ಲಿ ಎಂಪವರ್ ದಿ ಪ್ಯೂಚರ್ ಎನ್ನುವ ಅವರ್ನೆಸ್ ಕಾರ್ಯಕ್ರಮ ದೂದ್ ನಾನಾ ಕಲ್ಬರಲ್ ಫೌಂಡೇಶನ್ ಹಾಗೂ ಅಲ್ ಸಲಾಮ್ ಕೌನ್ಸಿಲಿಂಗ್ ಸೆಂಟರ್ ವತಿಯಿಂದ ನಡೆಯಲಿದೆ.ಎಂದು ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಮ್ಮ ಮಕ್ಕಳು ಮಾದಕ ಪದಾರ್ಥ ದಾಸರಾಗಿದ್ದಾರೆಯೇ ಎಂಬುದನ್ನು ಹೇಗೆ ಪತ್ತೆ ಹಚ್ಚಬಹುದು.? ಹೆತ್ತವರು ಹೇಗೆ ಪರಿಹಾರ ಕಂಡುಕೊಳ್ಳಬೇಕು.? ಮೊಹಲ್ಲಾ ಸಮಿತಿಯವರ ಜವಾಬ್ದಾರಿ. ಇಮಾಮರು ಜುಮಾ ದಿನ ಹೇಗೆ ಸಲಹೆ ನೀಡಬಹುದು.? ಇತ್ಯಾದಿ ಸಮಗ್ರ ಮಾಹಿತಿಯೊಂದಿಗೆ ಅಂತಾರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ತರಗತಿ ನಡೆಸಿಕೊಡಲಿದ್ದಾರೆ. ಮಂಗಳೂರು ಪೋಲಿಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಕಾನೂನು ಸಲಹೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶರೀಫ್ ಹಾಜಿ ವೈಟ್ ಸ್ಟೋನ್ ವಹಿಸಲಿದ್ದು ಸೆಯ್ಯದ್ ಅಮೀರ್ ತಂಙಳ್ ದುಆ ನೆರವೇರಿಸಲಿದ್ದಾರೆ.
ಅಲ್ ಸಲಾಮ ಅಧ್ಯಕ್ಷ ಜಿ.ಎ ಬಾವಾ ಕಾರ್ಯ ಯೋಜನೆಯ ಮಾಹಿತಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ,ಬಿ ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉದ್ಯಮಿ ಮುಸ್ತಫಾ ಭಾರತ್ ಸಂದೇಶ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಿದ ಸ್ಪೀಕರ್ ಯು.ಟಿ ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಝಕರಿಯಾ ಜೋಕಟ್ಟೆ ಹಾಗೂ ಮಾನವೀಯ ಸೇವೆ ನೀಡಿದ ಝೈನುಲ್ ಆಬಿದ್ರವರನ್ನು ವಿಶೇಷವಾಗಿ ಗೌರವಿಸಲಾಗುವುದು. ಮಾಜಿ ವಿಧಾನ ಪರಿಷತ್ ಸದಸ್ಯ ಬಿ. ಎಂ ಫಾರೂಕ್ ಪ್ರಾಜೆಕ್ಟ್ ಅನಾವರಣ ಗೊಳಿಸಲಿದ್ದಾರೆ. ಏನಪೋಯ ಅಬ್ದುಲ್ಲ ಕುಂಞ್ಹ, ಇನಾಯತ್ ಅಲಿ ಮುಲ್ಕಿ, ಹೈದರ್ ಪರ್ತಿಪ್ಪಾಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡು ಮಧ್ಯಾಹ್ನ 12:30ರ ತನಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು ಉಲಮಾಗಳು ಹಾಗೂ ಯುವ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಹಾಜಿ ಬಿ ಎಂ ಶರೀಫ್ ವೈಟ್ ಸ್ಟೋನ್, ಕಾರ್ಯಧ್ಯಕ್ಷರು. ಶೈಖ್ ಮುಹಮ್ಮದ್ ಇರ್ಫಾನಿ, ಸಂಚಾಲಕರು. ಫಕೀರಬ್ಬ ಮಾಸ್ಟರ್, ಕೋಶಾಧಿಕಾರಿ
ಝನುಲ್ ಆಬಿದ್ ಬಿ. ಕೆ, ದೂದ್ ನಾನಾ ಫೌಂಡೇಶನ್ ಅಧ್ಯಕ್ಷರು , ಅಶ್ರಫ್ ಕುಂಬ್ರ ,ಮೊಹಮ್ಮದ್ ಕುಂಞ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

