ಮಂಗಳೂರು : ಸೆಂಟ್ರಲ್ ಮಾರ್ಕೆಟ್ ಗುರ್ಜಿ ದೀಪೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತಿಚಿಗೆ ನಡೆಯಿತು.ಅಧ್ಯಕ್ಷರಾಗಿ ಹರೀಶ್ ಪೂಜಾರಿ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ರಘನಾಥ ಸೋಮಯಾಜಿ, ಪ್ರದಾನ ಸಲಹೆಗಾರ ರಾಘವೇಂದ್ರ ಶಾಸ್ತ್ರಿ, ಸಲಹೆಗಾರ ಗಣೇಶ್ ಭಟ್ ಶರವು, ಉಪಾಧ್ಯಕ್ಷರುಗಳಾಗಿ ವರದರಾಜ್ ನಾಗ್ವೇಕರ್, ಬಾಲಕೃಷ್ಣ ಶೆಟ್ಟಿ, ಸುಬ್ರಹ್ಮಣ್ಯ ಪಿ.ಸಿ, ಪ್ರಧಾನ ಕಾರ್ಯದರ್ಶಿಯಾಗಿ – ನಂದಕಿಶೋರ್, ಕೋಶಾಧಿಕಾರಿಯಾಗಿ ಸುಮಂತ್ ಸೋಮಯಾಜಿ, ಸಹ ಕಾರ್ಯದರ್ಶಿ ಕಾರ್ತಿಕ್ ಪೈ, ಸಂಚಾಲಕರಾಗಿ ಪಾರಸ್,ಮತ್ತು ಸಂತೋಷ್ ಪ್ರಭು,ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆರಿಸಲಾಯಿತು.

