ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವರ 63ನೇ ವರ್ಷದ ದೀಪಾರಾಧನೆ ಉತ್ಸವ ” ಸೆಂಟ್ರಲ್ ಮಾರ್ಕೆಟ್ ಗುರ್ಜಿ “ಯನ್ನು ನವೆಂಬರ್ 17 ರಂದು ಸೆಂಟ್ರಲ್ ಮಾರ್ಕೆಟ್ ಎದುರುಗಡೆ ಆಚರಿಸಲಾಗುತ್ತದೆ.

ಅಂದು ಸಂಜೆ 6 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಶಾಸ್ತ್ರಿ.ಅರ್ಚಕರು ಮತ್ತು ಧರ್ಮದರ್ಶಿಗಳು ಶರವು ದೇವಸ್ಥಾನ, ಶ್ರೀ ಅಡಿಗ ಕ್ರಷ್ಣ ಶೆಣೈ.ಧರ್ಮದರ್ಶಿ ವೆಂಕಟರಮಣ ದೇವಸ್ಥಾನ.ರಥಬೀದಿ, ಶ್ರೀ ಜಯರಾಜ್.ಎಚ್.ಎಸ್.ಅಧ್ಯಕ್ಷರು ಶ್ರೀ ಕ್ಷೇತ್ರ ಗೋಕರ್ಣನಾಥ ದೇವಸ್ಥಾನ.ಕುದ್ರೋಳಿ, ಶ್ರೀನಿವಾಸ್ ಕಾಮತ್ .ವ್ಯವಸ್ಥಾಪಕ ಟ್ರಸ್ಟಿ ಕುಡ್ತೇರಿ ಮಹಾಮ್ಮಾಯಿ ದೇವಸ್ಥಾನ .ರಥಬೀದಿ, ಶ್ರೀ ಗುರುರಾಜ್ ಉಪಾಧ್ಯಾಯ. ಪ್ರಧಾನ ಅರ್ಚಕರು ಕಾರಣಿಕ ಮುಖ್ಯಪ್ರಾಣ ದೇವಸ್ಥಾನ, ಶ್ರೀ ದಿಲ್ ರಾಜ್ ಆಳ್ವ .ಧರ್ಮದರ್ಶಿ ಕದ್ರಿ ದೇವಸ್ಥಾನ, ಶ್ರೀ ಅಶೋಕ್ ಕುಮಾರ್ ನಿಕಟ ಪೂರ್ವ ಅಧ್ಯಕ್ಷರು ಹಳೇಕೋಟೆ ಮಾರಿಯಮ್ಮ ದೇವಸ್ಥಾನ ಇವರು ಭಾಗವಹಿಸಲಿದ್ದಾರೆ.

ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಎಂ.ಕ್ರಷ್ಣ ಭಟ್ ತಂಡದವರಿಂದ ಭಜನೆ ಮತ್ತು ಕುಣಿತ ಭಜನೆ, ರಾಧಿಕ ಶೆಟ್ಟಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ, ಗರ್ಬಾ ಮತ್ತು ದಾಂಡಿಯಾ ನ್ರತ್ಯ, ವೀರ ವೆಂಕಟೇಶ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ.9:30ಕ್ಕೆ ಸರಿಯಾಗಿ ಗುರ್ಜಿ ದೀಪಾರಾಧನೆ ನಂತರ ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಹರೀಶ್ ಪೂಜಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


