ಬದಿಯಡ್ಕ: ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ಜಿ.ಕೆ. ಚಾರಿಟೇಬಲ್ ಟ್ರಸ್ಟ್ ವಾಂತಿಚ್ಚಾಲು ಇವರ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ಶನಿವಾರ ಜರಗಿತು.
ಜನಾನುರಾಗಿ ವೈದ್ಯ ಡಾ| ಶ್ರೀನಿಧಿ ಸರಳಾಯ ಪುಷ್ಪಾರ್ಚನೆಗೈದು ನುಡಿನಮನಗಳನ್ನು ಸಲ್ಲಿಸುತ್ತಾ ಗಿಡಮರಗಳನ್ನೆಲ್ಲಾ ತನ್ನ ಮಕ್ಕಳಂತೆ ಪೋಷಿಸಿದ ಮಹಾತಾಯಿ ಅವರಾಗಿದ್ದಾರೆ. ಅವರು ನೆನಪು ನಾಡಿನೆಲ್ಲೆಡೆ ಸದಾ ಹಸಿರಾಗಿರಬೇಕು ಎಂಬುದೇ ನಮ್ಮ ಆಶಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಾಲುಮರದ ತಿಮ್ಮಕ್ಕ ಅವರ ಹೆಸರು ಸದಾಹಸಿರಾಗಿರುವಂತೆ ಅವರ ಹೆಸರಿನಲ್ಲಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಅವರ ನೆನಪಿನಲ್ಲಿ ಗಿಡವನ್ನು ನೆಟ್ಟು ಸದಾಕಾಲ ಪೋಷಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೇರಳ ಸರಕಾರದ ಪಠ್ಯಪುಸ್ತಕದಲ್ಲಿಯೂ ಅವರ ಜೀವನಚರಿತ್ರೆ ಒದಗಿಬರಬೇಕೆಂಬ ಅದು ಮುಂದಿನ ಮಕ್ಕಳಿಗೂ ದಾರಿದೀಪವಾಗಬೇಕು ಎಂಬ ಆಶಯ ನಮ್ಮದಾಗಿದೆ ಎಂದರು.
ಜಿಕೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಅಧ್ಯಾಪಕ ವೆಂಕಟ್ರಾಜ ವಾಶೆಮನೆ, ಹರೀಶ್ ನಾರಂಪಾಡಿ, ವ್ಯಾಪಾರಿ ವ್ಯವಸಾಯ ಕೋಪಾನ ಸಮಿತಿಯ ಅಧ್ಯಕ್ಷ ನರೇಂದ್ರ ಬದಿಯಡ್ಕ, ಉದಯ ಮನ್ನಿಪ್ಪಾಡಿ,ಜಗನ್ನಾಥ ರೈ, ಸಂತೋಷ್ ರೈ ಬದಿಯಡ್ಕ, ದಯಾನಂದ ರೈ, ಪಾಂಡುರoಗ ಪ್ರಭು ಬದಿಯಡ್ಕ, ಜಗನ್ನಾಥ ರೈ ಕೊರೆಕ್ಕಾನ, ಜಗದೀಶ್ ಜೋಗಿ, ಜಿಶನ್ ವಾಂತಿಚ್ಚಾಲು, ಪತ್ರಕರ್ತ ಶ್ಯಾಮಪ್ರಸಾದ ಸರಳಿ ಮೊದಲಾದವರು ಪಾಲ್ಗೊಂಡಿದ್ದರು. ಅಭಿಷೇಕ್ ಬದಿಯಡ್ಕ ವಂದಿಸಿದರು.

