ಧಾರವಾಡ : ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ (ನ.18 ರಂದು) ಸಂಜೆ 6.30ಗಂಟೆಗೆ ವಾರ್ಷಿಕ ದೀಪೋತ್ಸವ ನಡೆಯಲಿದೆ. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದೀಪೋತ್ಸವ ಉದ್ಘಾಟಿಸುವರು. ದೀಪೋತ್ಸವದ ನಂತರ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.
ಪ್ರಾತಃಕಾಲದಲ್ಲಿ ದೀಪೋತ್ಸವದ ಅಂಗವಾಗಿ ಶ್ರೀದ್ಯಾಮವ್ವತಾಯಿ ಹಾಗೂ ಶ್ರೀದುರ್ಗಾಮಾತೆಯರಿಗೆ ವಿಶೇಷ ಅಲಂಕಾರ ಪೂಜೆ ನಡೆಯುವುದು. ಸಂಜೆಯ ದೀಪೋತ್ಸವದಲ್ಲಿ ಅಮ್ಮಿನಬಾವಿ ಗ್ರಾಮದ ಎಲ್ಲ ಓಣಿಗಳ ಮತ್ತು ಹೊಸ ಬಡಾವಣೆಗಳ ಹಿರಿಯರು, ಶ್ರೀಗ್ರಾಮದೇವಿ ಯುವ ಮಿತ್ರ ಸೇವಾ ಬಳಗ, ಮಹಿಳಾ ಮಂಡಳ, ಸ್ತಿಶಕ್ತಿ ಬಳಗ, ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳು ಹಾಗೂ ಸಮಸ್ತ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.

