ಮಂಗಳೂರು: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ನವೆಂಬರ್ 26, ಬುಧವಾರ ಮುಂಜಾನೆ 7 ಗಂಟೆಗೆ ಭವ್ಯ ನವಗ್ರಹ ಶಾಂತಿ ಹೋಮ ಜರುಗಲಿದೆ.ಮಠದಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ವರು ಹಿರಿಯ ಸನ್ಯಾಸಿನಿಯರು ಈ ವೈದಿಕ ಕ್ರಿಯೆಯನ್ನು ನೆರವೇರಿಸಲಿರುವುದು ವಿಶೇಷ.
ಈ ಹೋಮವನ್ನು ಅಮ್ಮನವರ ಆಶೀರ್ವಾದದಡಿ ಮಠದ ಹಿರಿಯ ಸನ್ಯಾಸಿನಿಯರಾದ ಸ್ವಾಮಿನಿ ಮಂಗಳಾಮೃತ ಪ್ರಾಣ, ಸ್ವಾಮಿನಿ ಸುವಿದ್ಯಾಮೃತ ಪ್ರಾಣ, ಸ್ವಾಮಿನಿ ನಿಷ್ಟಾಮೃತ ಪ್ರಾಣ, ಸ್ವಾಮಿನಿ ಅಮಲಾಮೃತ ಪ್ರಾಣ ಇವರು ಆಶ್ರಮದ ತಾಂತ್ರಿಕ ಹಾಗೂ ಪರಂಪರೆಯ ವಿಧಿವಿಧಾನಗಳನ್ವಯ ಸಂಪನ್ನಗೊಳಿಸಲಿದ್ದಾರೆ.
ಕರಾವಳಿ ಕರ್ನಾಟಕದ ವಿವಿಧ ಸಮಿತಿಗಳ ಪದಾಧಿಕಾರಿಗಳು,ಅಮೃತ ಶ್ರೀ ಮತ್ತು ಅಮೃತ ಕುಟುಂಬದ ಸದಸ್ಯರು,ಭಕ್ತರು ಹಾಗೂ ಸಾರ್ವಜನಿಕರು ಹೋಮದಲ್ಲಿ ಭಾಗವಹಿಸಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮಾಡಲು ಆಹ್ವಾನಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್, “ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಿಕ ಶಾಂತಿ–ಸಮೃದ್ಧಿಯನ್ನು ವರಿಸಿಕೊಳ್ಳುವಂತೆ” ಕೋರಿದ್ದಾರೆ.

