ಬಂಟ್ವಾಳ: ಬಟ್ಟೆ ಅಂಗಡಿಗೆ ಬುರ್ಖಾಧರಿಸಿ ಗ್ರಾಹಕರ ಸೋಗಿನಲ್ಲಿ ಬಂದ ಪತ್ನಿ ಕ್ಯಾಶ್ ಕೌಂಟರ್ನಲ್ಲಿ ಕುಳಿತಿದ್ದ ಪತಿಯನ್ನೇ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬಿ.ಸಿರೋಡಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ನಡೆದಿದೆ

ಕೃಷ್ಣ ಕುಮಾರ್ ಸೋಮಯಾಜಿ (57) ಅವರು ಪತ್ನಿಯ ಕತ್ತಿಯೇಟಿನಿಂದ ಗಂಭೀರ ಸ್ವರೂಪದ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದೆ.ಗಾಯಾಳುವಿನ ಪತಿ ಆರೋಪಿ ಜ್ಯೋತಿ ಸೋಮಯಾಜಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೃಷ್ಣ ಕುಮಾರ್ ಸೋಮಯಾಜಿ ಅವರು ಬಿ.ಸಿ.ರೋಡಿನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದ ಬಳಿ ವಸ್ತ್ರ ಮಳಿಗೆಯನ್ನು ಹೊಂದಿದ್ದು, ಸುಮಾರು ರಾತ್ರಿ 7ಗಂಟೆಗೆ ಬುರ್ಖಾ ಧರಿಸಿಕೊಂಡು ರಿಕ್ಷಾದಲ್ಲಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಆರೋಪಿ ಜ್ಯೋತಿ ಕ್ಯಾಶ್ ಕೌಂಟರ್ನಲ್ಲಿ ಕುಳಿತಿದ್ದ ಪತಿಯ ಮೇಲೆ ಏಕಾಏಕಿ ಕತ್ತಿ ಬೀಸಿದ್ದು, ಪರಿಣಾಮ ಕೃಷ್ಣ ಸೋಮಯಾಜಿ ಅವರು ಕೈಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಕೃತ್ಯದ ಬಳಿಕ ಆರೋಪಿ ಜ್ಯೋತಿ ಸ್ಥಳದಿಂದ ಪರಾರಿಯಾಗಿದ್ದು, ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆಕೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ. ಗಾಯಾಳುವಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆಯೆಂದು ಶಂಕಿಸಲಾಗಿದೆ.

