ಮಂಗಳೂರು : ಸದಾ ಆರ್ಥಿಕ ಚಟುವಟಿಕೆಗಳೊಂದಿಗೆ ಇರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಸಾಮಾಜಿಕ ಚಿಂತನೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಅಶಕ್ತ ವಿಕಲಚೇತನರಿಗೆ ಸವಲತ್ತು ವಿತರಿಸುವ ಕಾರ್ಯ ನಡೆಯುತ್ತಿದ್ದು ಇಂತಹ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲಿದ್ದೇವೆ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ್ ಬೆರ್ನಾರ್ಡ್ ನುಡಿದರು.
ಅವರು 2025ನೇ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅಶಕ್ತ ವಿಕಲಚೇತನರಿಗೆ ವೀಲ್ ಚೇರ್ ವಿತರಣಾ ಕಾರ್ಯಕ್ರಮ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಮ್. ಎನ್. ರಾಜೇಂದ್ರ ಕುಮಾರ್ ರವರ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿ ಕೊಡಿಪಾಡಿ ಸುರತ್ಕಲ್ ಇದರ ಅಧ್ಯಕ್ಷರಾದ ಶ್ರೀ ರೂಪೇಶ್ ರೈ ರವರು ಬಹುಮಾನ ವಿತರಣೆ ಮಾಡಿ, ಜಿಲ್ಲೆಯ ಅಪರೂಪದ ಕೋ ಆಪರೇಟಿವ್ ಸೊಸೈಟಿಯಲ್ಲಿ ಒಂದಾದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಹಳೆಯಂಗಡಿ ಶಾಖೆಯ ಶಾಖಾ ಪ್ರಬಂಧಕರಾದ ಶ್ರೀ ಜಗದೀಶ್ ಶೆಟ್ಟಿ, ಶ್ರೀಮತಿ ವಿಲ್ಮಾ ಡಿ ಕೋಸ್ತ, ಸಮಾಜ ಸೇವಕರು ಕಿನ್ನಿಗೋಳಿ ರವರು ಭಾಗವಹಿಸಿದರು.
ಚಿತ್ರಕಲಾ ಸ್ಪರ್ಧೆಯ ಬಹುಮಾನವಾಗಿ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ನಗದು ಬಹುಮಾನ (ಪ್ರಥಮ ರೂ.3,333/- ದ್ವಿತೀಯ ರೂ. 2,222/-) ವನ್ನು ಮಲ್ಟಿ ಕಲರ್ ವಿಭಾಗದಲ್ಲಿ ಕೆನರಾ ಪ್ರೌಢಶಾಲೆ ಉರ್ವ ಮಂಗಳೂರಿನ ವಿದ್ಯಾರ್ಥಿಯಾದ ಅದಿತ್ ಪ್ರಥಮ ಬಹುಮಾನ, ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಟೀಲಿನ ವಿದ್ಯಾರ್ಥಿನಿಯಾದ ತ್ರಿಷಾ ಆಚಾರ್ಯ ದ್ವಿತೀಯ ಬಹುಮಾನ, ಪೆನ್ಸಿಲ್ ಸ್ಕೆಚ್ ವಿಭಾಗದಲ್ಲಿ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಸ್ಕೂಲ್, ಸುರತ್ಕಲ್ ನ ವಿದ್ಯಾರ್ಥಿನಿಯಾದ ಜೆನಿಶಾ ಶ್ಲಿವಿಟಾ ಡಿಸೋಜ ಪ್ರಥಮ ಬಹುಮಾನ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮೂಲ್ಕಿಯ ವಿದ್ಯಾರ್ಥಿನಿಯಾದ ಅಭಿಜ್ಞಾ ಶ್ರೇಯಾ ದ್ವಿತೀಯ ಬಹುಮಾನ ಸ್ವೀಕರಿಸಿದರು.
ವೀಲ್ ಚೇರ್ ಫಲಾನುಭವಿಗಳಾದ ಕು. ಹಲೀಮ ಮರ್ವ ಇಂದಿರಾನಗರ, ಮಾಸ್ಟರ್ ಪ್ರತೀಕ್ಷ ಎಸ್ ಕರ್ಕೇರ ಸಸಿಹಿತ್ಲು, ಶ್ರೀಮತಿ ಪುಷ್ಪ ಪೂಜಾರ್ತಿ ಇಂದಿರಾನಗರ ರವರು ವೀಲ್ ಚೇರ್ ಸ್ವೀಕರಿಸಿದರು
ಸ್ವಸಹಾಯ ಗುಂಪಿನ ಪ್ರೇರಿಕಿ ನಿರಂಜಲ ರವರು ಪ್ರಾರ್ಥಿಸಿದರು, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಸುದರ್ಶನ್ ಸ್ವಾಗತಿಸಿ, ಸಾಲ ವಿಭಾಗದ ಪ್ರಬಂಧಕಿಯಾದ ಅಕ್ಷತಾ ಶೆಟ್ಟಿ ರವರು ನಿರೂಪಿಸಿ, ಲೆಕ್ಕಿಗರಾದ ಲೋಲಾಕ್ಷಿ ವಂದಿಸಿದರು.

