ಭೋಪಾಲ್ : ಮಧ್ಯಪ್ರದೇಶದ ಸಾಗರ್ನಲ್ಲಿ ಶುಕ್ರವಾರ ಮಸೀದಿ ಜಮೀನಿನ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಶ್ರೀರಾಮ ಮತ್ತು ಸೀತಾ ದೇವಿಯ ವಿಗ್ರಹಗಳು ಪತ್ತೆಯಾಗಿದೆ.

ಮಧ್ಯಪ್ರದೇಶದ ಸಾಗರ ಗ್ರಾಮದಲ್ಲಿನ ಜಾಮಾ ಮಸೀದಿ ಬಳಿ ಕಾಮಗಾರಿಗಾಗಿ ನೆಲ ಅಗೆಯುತ್ತಿದ್ದಾಗ ರಾಮ-ಸೀತೆಯ ವಿಗ್ರಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಊರಿನವರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ್ದಾರೆ. ಸಾಗರ್ನ ಪಪ್ಪೆಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಂಸ್ಕೃತ ಬಚಾವೊ ಮಂಚ್ನ ನಾಯಕ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು,ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು ಎಂಬುದು ಸಾಬೀತಾಗಿದೆ. ಈ ಸ್ಥಳದಲ್ಲಿ ಮತ್ತೆ ದೇವಾಲಯವನ್ನು ನಿರ್ಮಿಸಬೇಕು ಎಂಬುದು ಹಿಂದೂಗಳ ಬಯಕೆ ಇದೆ. ನಂತರದಲ್ಲಿ ಅದನ್ನು ಮುಸ್ಲಿಂ ಸಮುದಾಯದವರು ಆಕ್ರಮಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಎರಡೂ ಧರ್ಮದ ಜನಗಳ ನಡುವೆ ವಾಗ್ವಾದ ನಡೆಯುತ್ತಿದ್ದು ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ.
ಗ್ರಾಮದವರು ಹೇಳುವ ಪ್ರಕಾರ, ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಹಿಂದೆ ಹಿಂದೂ ದೇವಾಲಯವಿತ್ತು. ಆ ಜಾಗವನ್ನು ಬಹಳ ಹಿಂದೆಯೇ ರಾಜರ ಆಳ್ವಿಕೆಯ ಕಾಲದಲ್ಲಿ ಆಕ್ರಮಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಅಲ್ಲದೆ ಸ್ಥಳೀಯ ಹಿಂದೂ ನಾಯಕರು ವಿಗ್ರಹಕ್ಕೆ ಪೂಜೆಯನ್ನು ನೆರವೇರಿಸಿದ್ದಾರೆ . ನಿತ್ಯ ಪೂಜೆ ಮಾಡಲು ಅಲ್ಲೇ ಒಂದು ಸಣ್ಣ ವೇದಿಕೆಯನ್ನು ಕೂಡಾ ನಿರ್ಮಿಸಿದ್ದಾರೆ . ಇದರಿಂದಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಅನೇಕರು ಸ್ಥಳಕ್ಕೆ ಆಗಮಿಸಿ ದೊಡ್ಡ ಜನಸಂದಣಿ ಉಂಟಾಗಿದೆ.ಆದರೆ ಮುಸ್ಲಿಮರು ಪೂಜಾ ವಿಧಿವಿಧಾನಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಂ ಸಮುದಾಯದವರು ಇವು ಪ್ರತಿಮೆಗಳಲ್ಲ, ಅದು ಚಾಂಡೇಲಿ ಕಾಲದ ಸಾಮಾನ್ಯ ಕಲ್ಲುಗಳು ಎಂದು ಹೇಳುತ್ತಾರೆ. ಘಟನೆಯ ನಂತರ ಗ್ರಾಮದಲ್ಲಿ ಗದ್ದಲ ಉಂಟಾಗಿದ್ದು. ಇದೀಗ ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ.

