ಮುಲ್ಕಿ ಸೀಮೆಯ ಇತಿಹಾಸ ಪ್ರಸಿದ್ಧ ಅರಸು ಕಂಬಳ ಡಿ. 28 ರಂದು ವಿಜೃಂಭಣೆಯಿಂದ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಂಬಳದ ಕರೆಗೆ ಕೋಣಗಳನ್ನು ಸಾಂಪ್ರದಾಯಿಕವಾಗಿ ಇಳಿಸುವ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಪಡುಪಣಂಬೂರಿನ ಮುಲ್ಕಿ ಅರಮನೆಯಲ್ಲಿ ಕಂಬಳದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಂಪ್ರದಾಯದಂತೆ ವಾದ್ಯಗಳ ಘೋಷದೊಂದಿಗೆ ಮೆರವಣಿಗೆಯಲ್ಲಿ ಅರಮನೆಯ ಕೋಣಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ವಿಧಿವತ್ತಾಗಿ ಪೂಜಾ ವಿಧಿವಿಧಾನಗಳೊಂದಿಗೆ ಕೋಣಗಳನ್ನು ಕಂಬಳದ ಕರೆಗೆ ಇಳಿಸಲಾಯಿತು.


ಈ ಸಂದರ್ಭದಲ್ಲಿ ಗೌತಮ್ ಜೈನ್ ಮುಲ್ಕಿ ಅರಮನೆ, ಚಂದ್ರಶೇಖರ ಜಿ, ವಕೀಲರು ಕಾಸಪ್ಪಯ್ಯನವರಮನೆ, ಬಂಕಿ ನಾಯಕರು, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ವಸಂತ್ ಬೆರ್ನಾಡ್, ಅನಿಲ್ ಶ್ಯಾಮ್ ಶೆಟ್ಟಿ, ಅಬ್ದುಲ್ ರಜಾಕ್ ಮುಲ್ಕಿ, ಸಂತೋಷ್ ಕೊಪ್ಪಳ, ಚಂದ್ರಹಾಸ ಕೋಟ್ಯಾನ್ ಪಡುತೋಟ, ಸತೀಶ್ ಶೆಟ್ಟಿ, ಧರ್ಮಾನಂದ ಶೆಟ್ಟಿಗಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮುಲ್ಕಿ ಸೀಮೆಯಲ್ಲಿ ಈ ತಿಂಗಳು ಎರಡು ಪ್ರಮುಖ ಕಂಬಳಗಳು ನಡೆಯಲಿವೆ. ಡಿಸೆಂಬರ್ 21 ರಂದು ಕುದಿ ಕಂಬಳ ಹಾಗೂ ಡಿಸೆಂಬರ್ 28 ರಂದು ಇತಿಹಾಸ ಪ್ರಸಿದ್ಧ ಅರಸು ಕಂಬಳ ಜರುಗಲಿದೆ.

