ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಯೋಗ-ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ “ಭಾರತೀಯ ಜ್ಞಾನ ಮತ್ತು ಸಂಸ್ಕೃತ ಪರಂಪರೆಯ ಮೂಲಕ ಸಸ್ಟೈನಬಿಲಿಟಿ” ಎಂಬ ವಿಷಯದ ಮೇಲೆ ಅಂತರರಾಷ್ಟ್ರೀಯ ಸಮ್ಮೇಳನವನ್ನು ಡಿಸೆಂಬರ್ 13, 2025 ರಂದು ಮುಕ್ಕಾ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ.

ಈ ಸಮ್ಮೇಳನದ ಅಂಗವಾಗಿ, “ಸಂಸ್ಕೃತ-ಸಂಸ್ಕೃತಿ ಉತ್ಸವ: ಏಕ ಸಾಂಸ್ಕೃತಿಕ ಪ್ರದರ್ಶನ” ಎಂಬ ವಿಶೇಷ ಕಾರ್ಯಕ್ರಮವನ್ನು ಪಿಯು ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆ, ಭಾರತೀಯ ಶಿಲ್ಪ-ಸಂಗೀತ-ನೃತ್ಯ ಪರಂಪರೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರ ಪ್ರತಿಭೆಯನ್ನು ವೇದಿಕೆಗೆ ತರುವುದು ಉದ್ದೇಶವಾಗಿದೆ. ನೃತ್ಯ, ಗಾಯನ, ಶ್ಲೋಕ ಪಠಣ, ವಾದ್ಯಸಂಗೀತ ಹಾಗೂ ಭಾರತೀಯ ಪರಂಪರೆಯಿಂದ ಪ್ರೇರಿತವಾದ ಹಲವು ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದಲ್ಲಿ ನಡೆಯಲಿವೆ.

ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಪ್ರತಿ ತಂಡದಿಂದ ಗರಿಷ್ಠ 10 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಅದೇ ಸಂಸ್ಥೆಯಿಂದ ಹಲವು ತಂಡಗಳು ಭಾಗವಹಿಸುವುದಕ್ಕೆ ಅವಕಾಶವಿದೆ. ಪ್ರತಿ ತಂಡಕ್ಕೆ 15 ನಿಮಿಷಗಳ ಪ್ರದರ್ಶನ ಸಮಯ ನೀಡಲಾಗುತ್ತಿದ್ದು ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ. ನೋಂದಣಿಯ ಕೊನೆಯ ದಿನಾಂಕ ಡಿಸೆಂಬರ್ 8 ಆಗಿದ್ದು, ಉತ್ತಮ ತಂಡಗಳಿಗೆ ಬಹುಮಾನ ನೀಡಲಾಗುವುದು.
ವಿದ್ಯಾರ್ಥಿಗಳು ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಅರಿವು ವೃದ್ಧಿಸಿಕೊಳ್ಳುವ ಜೊತೆಗೆ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಲಿದ್ದಾರೆ. ನೋಂದಣಿಗಾಗಿ https://forms.gle/5vSiaRwbNbwNeBZB8 3; 3 & conferenceesuibm@srinivasuniversity.edu.in ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ಡಾ. ಎ.ಆರ್. ಶಬರಾಯ ಮತ್ತು ಡಾ. ಪ್ರವೀಣ್ ಬಿ.ಎಂ ಅವರ ನೇತೃತ್ವದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಆಯೋಜಿಸಿದೆ.

