ಮಂಗಳೂರು: ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಬ್ರಹತ್ ಸಹಕಾರಿ ಸಂಸ್ಥೆಯಾಗಿ ವಹಿವಾಟು ನಡೆಸುತ್ತಿರುವ ಕ್ಯಾಂಪೊ 2020-21ನೇ ಸಾಲಿನ 2,134.15 ಕೋಟಿ ರೂ ಗಳಿಂದ 2024- 2025ನೇ ಸಾಲಿನಲ್ಲಿ 3,631,00 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಐದು ವರ್ಷಗಳಲ್ಲಿ ಶೇ.70 ರಷ್ಟು ವಹಿವಾಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕ್ಯಾಂಪ್ಕೊ ನಿರ್ಗಮನ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಮಂಗಳೂರಿನ ಕ್ಯಾಂಪ್ಕೊ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಆಡಳಿತಾವಧಿಯ ಸಾಧನೆ ಬಗ್ಗೆ ಮಾಹಿತಿ ನೀಡಿದರು.

ಈಗ 3,631.91 ಕೋಟಿ ರೂ.ಐದು ವರ್ಷದ ಹಿಂದೆ 2,134.15 ಕೋಟಿ ರೂ. ಇದ್ದ ವಹಿವಾಟು ಈಗ 3,631.91 ಕೋಟಿ ರೂ. ತಲುಪಿದೆ. ಅಂದು 10,002.33 ಕೋಟಿ ರೂ. ಇದ್ದ ಲಾಭ ಈಗ 4,665.04 ಕೋಟಿ ರೂ. ಗೆ ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಎರಡು ವರ್ಷ ಹೊರತು ಪಡಿಸಿದರೆ ಮೂರು ವರ್ಷ ಲಾಭಾಂಶ ನೀಡಲಾಗಿದೆ ಎಂದರು.
ಶೀಘ್ರ ಕರಾವಳಿಗೆ ಕೃಷಿ ಸಚಿವರ ಭೇಟಿ ಕರಾವಳಿ ಹಾಗೂ ಮಲೆನಾಡು ಅಡಿಕೆ ತೋಟಗಳಲ್ಲಿ ಕಂಡುಬಂದಿರುವ ಹಳದಿ ಎಲೆ ರೋಗಕ್ಕೆ ಪರಿಹಾರೋಪಾಯ ಹಾಗೂ ಸಂತ್ರಸ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಬೆಳೆ ಬೆಳೆಸಲು ಪ್ರೋತ್ಸಾಹ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಳ್ಳಲಾಗಿದೆ. ದ.ಕ. ಸಂಸದ ಕ್ಯಾ, ಬ್ರಿಜೇಶ್ ಚೌಟ,ಈ ವಿಚಾರವನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶೀಘ್ರ ಕರಾವಳಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ನಿರೀಕ್ಷೆ ಇದೆ ಎಂದರು.

ವೈದ್ಯಕೀಯ ಸಂಶೋಧನೆಗಳು ಸಾಗಿವೆ ಅಡಿಕೆಯನ್ನು ಕ್ಯಾನ್ಸರ್ಕಾರಕ ಎಂದು ವರ್ಗಿಕರಿಸಿರುವುದನ್ನು ತೆಗೆದು ಹಾಕುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್ ಸಿಗೆ ಮನವಿ ಸಲ್ಲಿಸಲಾಗಿದೆ. ಅಡಿಕೆ ಕ್ಯಾನ್ಸರ್ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ಕೇಂದ್ರ ಸ್ವಾಮ್ಯದ ಐಸಿಎಆರ್-ಸಿಪಿಸಿಆರ್ಐ ನೇತೃತ್ವದಲ್ಲಿ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಅಡಿಕೆ ಕ್ಯಾನ್ಸರ್ಕಾರಕವಲ್ಲ ಎಂಬ ಕ್ಯಾಂಪ್ಕೊದ ಮನವಿ ಮೇರೆಗೆ 9.5 ಕೋಟಿ ರೂ. ವೆಚ್ಚದಲ್ಲಿ ಅಡಿಕೆ ಮತ್ತು ಮಾನ ಆರೋಗ್ಯದ ಮೇಲಿನ ಸಾಕ್ಷ್ಯಾಧಾರಿತ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ ಆದಷ್ಟು ಶೀಘ್ರ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದರು.
ಹೊಸ ಅಡಿಕೆ 2020ರಲ್ಲಿ ಕೆಜಿಗೆ 240ರಿಂದ 320 ಇತ್ತು ಈಗ 360ರಿಂದ 485 ಕ್ಕೆ ಏರಿಕೆಯಾಗಿದೆ.ಚಾಲಿ ಅಡಿಕೆ 2020 ರಲ್ಲಿ 320 ರಿಂದ 380 ಇತ್ತು ಈಗ 36೦ ರಿಂದ 525ಕ್ಕೆ ಏರಿಕೆಯಾಗಿದೆ, ಕೆಂಪು ಅಡಿಕೆ 2020ರಲ್ಲಿ 350-398 ರೂ ಇತ್ತು 2025ರಲ್ಲಿ 545-585 ರೂ ಏರಿಕೆಯಾಗಿದೆ ಎಂದರು.

ಆಮದು ನೀತಿ ಪರಿಷ್ಕರಣೆಯಿಂದ ಹೊರ ದೇಶಗಳಿಂದ ಶೇ. 90ರಷ್ಟು ಅಡಿಕೆ ಆಮದು ಸ್ಥಗಿತವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆ ಬೆಳೆಗಾರರಿಗೆ ಉತ್ತಮ ದರ ದೊರೆಯುವಂತಾಗಿದೆ. ಕ್ಯಾಂಪ್ಕೊ ಪ್ರಯತ್ನದ ಪರಿಣಾಮ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.
ಕ್ಯಾಂಪೊದಿಂದ ಮಾಲೀನ್ಸ್ಗೆ ರಫ್ತುಗೊಳ್ಳುತ್ತಿದೆ. ಅಲ್ಲದೆ ಮೋರಾ ಅಡಿಕೆ ಅಮೆರಿಕ ಮತ್ತು ಗಂಡುಗಳಿಗೆ ರಫ್ತಾಗುತ್ತಿದೆ. ಸೌಗಂದ್ ಹೆಸರಿನ ರಾಜು ಸುಪಾರಿಯನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಲಾಗಿದೆ. ಕಾಲಾ ಸೋನಾ ಹೆಸರಿನಲ್ಲಿ ಪೆಪ್ಪರ್ ಸ್ಯಾಚೆಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.ಎಂದು ಕೊಡ್ಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪೊ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಮಡ್ತಿಲ, ಬಾಲಕೃಷ್ಣ ರೈ, ದಯಾನಂದ ಹೆಗ್ಡೆ, ರಾಧಾಕೃಷ್ಣ ಸತ್ಯನಾರಾಯಣ ಪ್ರಸಾದ್, ರಾಘವೇಂದ್ರ, ಡಾ.ಜಯಪ್ರಕಾಶ್, ರಾಘವೇಂದ್ರ ಭಟ್ ವುತ್ತೂರು, ಎಂಡಿ ಡಾ.ಸತ್ಯನಾರಾಯಣ, ಜನರಲ್ ಮೆನೇಜರ್ ರೇಷ್ಠಾ ಮಲ್ಕ, ಅಡಿಕೆ ಸಂಶೋಧನಾ ಪ್ರತಿಷ್ಠಾನ ಅಧಿಕಾರಿ ಡಾ.ಕೇಶವ ಭಟ್ ಮತ್ತಿತರರಿದ್ದರು.

