ಮಂಗಳೂರು : 1926ರಲ್ಲಿ ಸ್ಥಾಪನೆಯಾದ ಬೆಂಗರೆಯ ವೀರಭಾರತಿ ವ್ಯಾಯಾಮ ಶಾಲೆಯ ಶತಮಾನೋತ್ಸವದ ಅಂಗವಾಗಿ ವ್ಯಾಯಾಮ ಶಾಲೆಯ ಕಟ್ಟಡ ಹಾಗೂ ಶ್ರೀ ರಾಮಚಂದ್ರ ಮತ್ತು ಆಂಜನೇಯ ದೇವರಿಗೆ ಪ್ರತ್ಯೇಕ ಗರ್ಭಗುಡಿಯನ್ನು ನಿರ್ಮಾಣ ಮಾಡುವ ಪ್ರಯುಕ್ತ ಇದೇ ಡಿಸೆಂಬರ್ 5 ರಂದು ಶಿಲಾನ್ಯಾಸ ಕಾರ್ಯಕ್ರಮವು ಜರಗಲಿರುವುದು ಅಂದು ಬೆಳಿಗ್ಗೆ 8:55 ಕ್ಕೆ ವೇದಮೂರ್ತಿ ಶ್ರೀ ಶಿವಪ್ರಸಾದ್ ತಂತ್ರಿಯವರ ಮಾರ್ಗದರ್ಶನದಲ್ಲಿ ನಾಡೋಜ ಡಾ.ಜಿ ಶಂಕರ್ ಇವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಲಿರುವುದು ಎಂದು ಜೀರ್ಣೋದ್ದಾರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮೋಹನ್ ಬೆಂಗ್ರೆಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿತ್ ಜಿ. ಸುವರ್ಣ ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಶಿಕ್ಷಣ ಮಂಡಳಿ,ಮುಂಬೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಐವನ್ ಡಿ’ಸೋಜಾ.ರಾಜ್ಯ ವಿಧಾನ ಪರಿಷತ್ ಸದಸ್ಯರು, ಶ್ರೀ ಶಶಿಕುಮಾರ್ ಬೆಂಗ್ರೆ (ಬಾಲು) ಮಾಜಿ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ, ಶ್ರೀ ಮಹಾವಿಷ್ಣು ಶೇಷಶಯನ ಭಜನಾ ಮಂದಿರ ಬೆಂಗ್ರೆ, ಮಾಜಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆ, ಬೆಂಗ್ರೆ, ಶ್ರೀ ಸಂಜಯ್ ಸುವರ್ಣ ಅಧ್ಯಕ್ಷರು, ಬೆಂಗರೆ ಮಹಾಜನ ಸಭಾ,
ಶ್ರೀ ಅನಿಲ್ ಕುಮಾರ್ ಅಧ್ಯಕ್ಷರು, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘ, ಮಂಗಳೂರು ಅಧ್ಯಕ್ಷರು, ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಹಕಾರ ಸಂಘ, ಶ್ರೀ ವರದರಾಜ ಬಂಗೇರ ಅಧ್ಯಕ್ಷರು,ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಶ್ರೀ ಚೇತನ್ ಬೆಂಗ್ರೆ ಅಧ್ಯಕ್ಷರು, ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ಇವರು ಭಾಗವಹಿಸಲಿದ್ದಾರೆ.

ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಕಾರ್ಯಕ್ಕೆ ಅಂದಾಜು ವೆಚ್ಚ 1 ಕೋಟಿ 50 ಲಕ್ಷ ಆಗಲಿದ್ದು ಭಕ್ತಾಭಿಮಾನಿಗಳು ಹಾಗೂ ದಾನಿಗಳು ಶ್ರೀ ರಾಮಾಂಜನೇಯ ದೇವರ ಕೃಪೆಗೆ ಪಾತ್ರರಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಉತ್ತಮ ರೀತಿಯಲ್ಲಿ ನಡೆಯಲು ತನುಮನ ದನಗಳಿಂದ ಸಹಕರಿಸಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇವೆ.ಅಲ್ಲದೆ
ಶತಮಾನೋತ್ಸವದ ಕಾರ್ಯಕ್ರಮವು ಏಪ್ರಿಲ್ ತಿಂಗಳಿನಲ್ಲಿ ದೇವರ ಪ್ರತಿಷ್ಠಾಪನೆಯೊಂದಿಗೆ ಅನೇಕ ಧಾರ್ಮಿಕ ವೈದಿಕ ಕಾರ್ಯಗಳು ಸಭಾ ಕಾರ್ಯಕ್ರಮಗಳು ವಿವಿಧ ಬಗೆಯ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಚೇತನ್ ಬೆಂಗ್ರೆ ಅಧ್ಯಕ್ಷರು ಜೀರ್ಣೋದ್ದಾರ ಶತಮಾನೋತ್ಸವ ಸಮಿತಿ, ಆನಂದ ಅಮೀನ್ ಅಧ್ಯಕ್ಷರು ವೀರಭಾರತಿ ವ್ಯಾಯಾಮ ಶಾಲೆ, ಲಕ್ಷ್ಮಣ್ ಬೆಂಗ್ರೆ, ಹರಿಶ್ಚಂದ್ರ ಬೆಂಗ್ರೆ ಉಪಸ್ಥಿತರಿದ್ದರು.

