ಮಂಗಳೂರು : ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ಜರಗುತ್ತಿರುವ 69ನೇ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯ ಮೊದಲ ಎರಡು ದಿನಗಳಲ್ಲಿ ಮೂರು ಚಿನ್ನದ ಪದಕಗಳನ್ನು ಬಾಚಿದ ಮಂಗಳೂರಿನ ವಿ ಒನ್ ಎಕ್ವಾ ಸೆಂಟರ್ ನ ಈಜುಪಟುಗಳು.ಇಂದು ನಡೆದ ನಾಲ್ನೂರು ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ 19ರ ವಯೋಮಾನದ ವಿಭಾಗದಲ್ಲಿ ಎಂ. ತೀರ್ದು ಸಾಮದೇವ ಇವರು ಚಿನ್ನದ ಪದಕವನ್ನು ಗಳಿಸಿದರು

17ರ ವಯೋಮಾನದ ವಿಭಾಗದಲ್ಲಿ 400 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಯಗ್ನಸಾಯಿಯವರು ಚಿನ್ನದ ಪದಕ ಪಡೆದರು ಇವರು ಮೊದಲ ದಿನದ ಸ್ಪರ್ಧೆಯಲ್ಲಿ 800 ಮೀಟರ್ ಫ್ರೀ ಸ್ಟೈಲಲ್ಲಿ ಕೂಡ ಚಿನ್ನದ ಪದಕ ಗಳಿಸಿದ್ದರು
ಇವರು ದಿವಂಗತ ಚಿನ್ನರಾವ್ ಮತ್ತು ನವ್ಯ ದೀಪಿಕಾ ಇವರ ಸುಪುತ್ರರು ಪ್ರಸ್ತುತ ಮಾಧವ ವಿಲ್ಸನ್ ಹೈಯರ್ ಸೆಕೆಂಡರಿ ಸ್ಕೂಲ್ ತಿರುವನಂತಪುರಂ ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಉನ್ನತ ದರ್ಜೆಯ ಈಜು ತರಬೇತಿಗಾಗಿ ಮಂಗಳೂರಿಗೆ ಆಗಮಿಸಿ ಕೋಚ್ ಅಭಿಲಾಶ್ ರವರಲ್ಲಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ.

