ಮಂಗಳೂರು : ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರಾಗಿರುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಈ ಬಾರಿ ವಿಶೇಷ ಚೇತನ ಮಕ್ಕಳಿಗಾಗಿ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸಾಂತಾನ ಸಂಚಾರ 3.0 – A Day with Special Kids’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಡಿಸೆಂಬರ್ 7 ರಂದು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದರು.

ಅವರು ಪಂಪ್ ವೆಲ್ ನ ಖಾಸಗಿ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,”ಈ ಬಾರಿ ನಾವು 100 ವಿಶೇಷ ಚೇತನ ಮಕ್ಕಳಿಗೆ ಒಂದೂ ದಿನದ ಸಂತೋಷ ಆಟ-ಪಾಠ ಹಾಗೂ ಹೊಸ ಅನುಭವಗಳನ್ನು ನೀಡಲು ಸಜ್ಜಾಗಿದ್ದೇವೆ,” ಎಂದರು.ಕಳೆದ ಎರಡು ವರ್ಷಗಳಲ್ಲಿ ಹಾಸಿಗೆ ಪೀಡಿತರ ಹಾಗೂ ಅನಾಥ ಮಕ್ಕಳ ಜೊತೆ ಸಂಚಾರ ನಡೆಸಿದ ಅನುಭವವನ್ನು ಹಂಚಿಕೊಂಡರು.
2023ರಲ್ಲಿ ಮೊದಲ ವರ್ಷದ ಸಾಂತ್ವನದ ಸಂಚಾರ’(A Day with Bedridden)ಮತ್ತು 2024ರಲ್ಲಿ ಸಾಂತ್ವನದ ಸಂಚಾರ’ (A day with orphans) ಯಶಸ್ವಿಯಾಗಿ ನಡೆದಿತ್ತು. ಎರಡು ವರ್ಷಗಳ ಹಿಂದೆ ಹಾಸಿಗೆ ಪೀಡಿತರ ಜೊತೆ ಆರಂಭವಾದ ನಮ್ಮ ಸಾಂತ್ವನದ ಸಂಚಾರವು ಕಳೆದ ಬಾರಿ ಅನಾಥ ಮಕ್ಕಳ ಜೊತೆ ಮುಂದುವರಿದು ಈ ಬಾರಿ ವಿಶೇಷ ಚೇತನ ಮಕ್ಕಳ ಜೊತೆ ಸಾಗಲಿದೆ ಎಂದರು.

ಇನ್ನು ಸಾಂತ್ವನದ ಸಂಚಾರ 3.O ( A Day with Special Kids)’ ಹೆಸರಿನ ಕಾರ್ಯಕ್ರಮ ಡಿಸೆಂಬರ್ 7ರ ಭಾನುವಾರ ಮಂಗಳೂರಿನಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 100 ವಿಶೇಷ ಚೇತನ ಮಕ್ಕಳನ್ನು ಸಾಂತ್ವನದ ಸಂಚಾರಕ್ಕೆ ಆಯ್ದುಕೊಂಡಿದ್ದೇವೆ. (ಎರಡು ಕೇಂದ್ರಗಳಿಂದ 90 ಮಕ್ಕಳು ಮತ್ತು ಹೊರಗಿನಿಂದ 10 ಮಕ್ಕಳು) ಎಂದು ಮಾಹಿತಿ ನೀಡಿದರು.
ಇಬ್ಬರು ಮಕ್ಕಳಿಗೆ ಒಬ್ಬರಂತೆ 100 ಮಕ್ಕಳಿಗೆ 50 ಮಂದಿ ಕೇರ್ ಟೇಕರ್ಸ್ ನಿಯೋಜಿಸಲಾಗಿದೆ ಮತ್ತು CFM ಸಂಸ್ಥೆಯ 60 ಮಂದಿ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 4 ಬಸ್ಗಳಲ್ಲಿ ವಿಶೇಷ ಚೇತನ ಮಕ್ಕಳ ಸಂಚಾರ ನಡೆಯಲಿದ್ದು, ತುರ್ತು ಸೇವೆಗಾಗಿ ಎರಡು ಅಂಬುಲೆನ್ಸ್, ಇಬ್ಬರು ವೈದ್ಯರು ಮತ್ತು ಒಬ್ಬರು ಫಿಸಿಯೋಥೆರಪಿಸ್ಟ್ ಇರುತ್ತಾರೆ. ವಿಶೇಷ ಚೇತನ ಮಕ್ಕಳು ಮತ್ತು ಸಂಸ್ಥೆಯ ಸದಸ್ಯರಿಗೆ ಸಮವಸ್ತ್ರ ಮಾದರಿ ಟಿ-ಶರ್ಟ್ ವಿತರಿಸಲಾಗುವುದು ಎಂದರು.

ಬೆಳಿಗ್ಗೆ 8.30ಕ್ಕೆ ಹೋಟೆಲ್ BMS ನಲ್ಲಿ ಉಪಹಾರ ಮತ್ತು ವೈಭವೋಪೇತ ಸ್ವಾಗತದೊಂದಿಗೆ ಸಂಚಾರ ಆರಂಭಗೊಳ್ಳಲಿದೆ. ಬ್ಯಾಂಡ್ ಸೆಟ್ ಪ್ರದರ್ಶನ, ಬಿಗ್ ಡಾಲ್ ಪರೇಡ್ ಹಾಗು ಸನ್ಗ್ರಾಸ್- ಕ್ಯಾಪ್ ವಿತರಣೆ ಮಕ್ಕಳಿಗೆ ಹೆಚ್ಚುವರಿ ಉತ್ಸಾಹ ತುಂಬಲಿವೆ. ಪಿಲಿಕುಳ ನಿಸರ್ಗಧಾಮ ವೀಕ್ಷಣೆ ,ಮದ್ಯಾನ್ಹ ವೇಳೆಗೆ ಪಾಲೇಮಾರ್ ಗಾರ್ಡನ್ನಲ್ಲಿ, ಸ್ವಿಮ್ಮಿಂಗ್ ಪೂಲ್ ಚಟುವಟಿಕೆ, ಆಟಗಳು, ಸ್ಪರ್ಧೆಗಳು ಲೈವ್ ಪಿಜ್ಜಾ ಕೌಂಟರ್, ಪಾಪ್ಕಾರ್ನ್, ವಾಟರ್ ಬ್ಯಾಲೂನ್ ಫನ್, ಚಿತ್ರಕಲೆ ಜೋನ್, ಸೆಲ್ಲಿ ಕೌಂಟರ್-ಇವೆಲ್ಲವು ಮಕ್ಕಳಿಗೆ ದಿನವಿಡೀ ಸಂಭ್ರಮ ನೀಡಲಿವೆ. ಸಂಜೆ 6.30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಕೆ ಕುಕ್ಕಿಲ, ಝಿಯಾ ವೆಲ್ನೆಸ್, ಮಹಮ್ಮದ್ ಉಚ್ಷಿಲ, ಹಸೈನಾರ್ ತಾಳಿತ್ತನೂಜಿ ಮತ್ತು ಉಬಾರ್ ಡೋನರ್ಸ್ ಇವರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶೌಕತ್ ಅಲಿ, CFM ಪ್ರಧಾನ ಕಾರ್ಯದರ್ಶಿ ,ಅಫ್ತಾಬ್ ಬಸ್ತಿಕಾರ್, ಕಾರ್ಯಕ್ರಮದ ಪ್ರಧಾನ ಸಂಚಾಲಕರು, ಮುನ್ನ ಕಮ್ಮರಡಿ, ಕಾರ್ಯಕ್ರಮದ ಸಂಚಾಲಕರು, ಜುನೈದ್ ಬಂಟ್ವಾಳ, CFM ಕಾರ್ಯದರ್ಶಿ
ಇಮ್ತಿಯಾಝ್ ಎಸ್.ಎಂ, CFM ಖಜಾಂಚಿ, ಸಮೀರ್ ಲಕ್ಕಿಸ್ಟಾರ್, CFM ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

