ಮಂಗಳೂರು :ಕರಾವಳಿಯ ಬಲು ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್ರಿಗೆ ರಾಜ್ಯ ಸರಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸಹಕಾರಿ ರಂಗದ ಅಪಾರ ಸೇವೆಯನ್ನು ಗುರುತಿಸಿ ಪ್ರಶಸಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತಗೊಂಡ ಅವರಿಗೆ ನಾಗರಿಕ ಪೌರ ಸನ್ಮಾನದ ಭಾಸ್ಕರಾಭಿನಂದನೆ ಕಾರ್ಯಕ್ರಮವು ಡಿ.6 ರಂದು ಅಪರಾಹ್ನ 3 ಗಂಟೆಯಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕಾದ ಚಿತ್ತರಂಜನ್ ಬೋಳಾರ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಜೆ 3 ಗಂಟೆಯಿಂದ ಚಲನಚಿತ್ರ ನಟ ಮಂಜು ರೈ ಮುಳೂರು ಇವರ ಹಾಸ್ಯ ನಿರೂಪಣೆಯೊಂದಿಗೆ ಜಿಲ್ಲೆಯ ಪ್ರಸಿದ್ದ ಕಲಾವಿರದರಿಂದ ಸಂಗೀತ, ಹಾಸ್ಯ, ಲಹರಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 3.45ಕ್ಕೆ ಆರಂಭವಾಗುವ ಸನ್ಮಾನ ಕಾರ್ಯಕ್ರಮದಲ್ಲಿ ಸೊಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕರು ಹಾಗೂ ಮಾಜಿ ಸಚಿವರಾದ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಸಂಸದ ಕ್ಯಾ,ಬ್ರಿಜೇಶ್ ಚೌಟ ದ್ವೀಪ ಪ್ರಜ್ವಲನೆ ಮಾಡಲಿರುವರು.ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಭಾಸ್ಕರಾಭಿನಂದನ ಸನ್ಮಾನ ನೆರವೇರಿಸುವರು. ಗೌರವ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಪುತ್ತೂರು ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಸದಾನಂದ ಪೂಜಾರಿ , ಸಂಚಾಲಕರಾದ ಕೆ. ಟಿ ಸುವರ್ಣ , ಅವಿನಾಶ್ ಸುವರ್ಣ,ನಿಶಾನ್ ಪೂಜಾರಿ, ಸುಧಾಕರ ಕರ್ಕೆರ, ಸಂತೋಷ್ ಬಂಗೇರ ಮುಂತಾದವರು ಉಪಸ್ಥಿತರಿದ್ದರು .

