ಮಂಗಳೂರು : ಲೋಕಸಭೆಯ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ನಿಷೇಧಿತ ಸಂಘಟನೆಯೊಂದಿಗೆ ಸಂಧಿಸಿದೆ ಎಂದು ನೇರವಾಗಿ ಆರೋಪವನ್ನು ಮಾಡಿದ್ದಾರೆ .
ಇದು ಅವರ ಪಕ್ಷದ ಕಾರ್ಯಕರ್ತರ ನಡುವೆ ಮೈಲೇಜ್ ಗಿಟ್ಟಿಸಿಕೊಳ್ಳುವ ಹುನ್ನಾರವಾಗಿದೆ ಅದು ಬಿಟ್ಟು ಜಿಲ್ಲೆಯ ಅಭಿವೃದ್ಧಿ ವಿಷಯಗಳನ್ನು ಲೋಕಸಭೆಯಲ್ಲಿ ಚರ್ಚಿಸಿ ಎಂದು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಕಿಡಿಕಾರಿದ್ದಾರೆ .

ಅವರು ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸಂಸದರಾದ ಬ್ರಿಜೇಶ್ ಚೌಟ ರವರು ಜಿಲ್ಲೆಯಲ್ಲಿ ಒಬ್ಬರು ಸಂಸದರು ಇದ್ದಾರಾ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿಲ್ಲ ಒಟ್ಟಾರೆ ತನ್ನನ್ನು ತಾನು ಪ್ರಚಾರದಲ್ಲಿರಲು ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಪ್ರಚಾರಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಅಲ್ಲದೆ ಲೋಕಸಭೆಯ ಅಧಿವೇಶನದಲ್ಲಿ ಎಸ್ ಡಿಪಿಐ ಬಗ್ಗೆ ಬೇಜವಾಬ್ದಾರಿ ಮತ್ತು ಅವಿವೇಕಿ ಹೇಳಿಕೆ ನೀಡುತ್ತಲೇ ಇರುತ್ತಾರೆ ಇದನ್ನು ನಾನು ಖಂಡಿಸುತ್ತೇನೆ .ಪ್ರಜಾಪ್ರಭುತ್ವದ ಸಂವಿಧಾನ ತತ್ವಗಳ ರಕ್ಷಣೆಯಾಗಬೇಕೆಂದು ನಿರಂತರವಾಗಿ ಹೋರಾಟವನ್ನು ಮಾಡುವವರು ನಮ್ಮ ಪಕ್ಷದವರು,
ಎಲ್ಲಿ ತಮ್ಮ ಪಕ್ಷ ಏಳಿಗೆಯನ್ನು ಕಾಣುತ್ತದೆಯೋ ಎನ್ನುವ ಭಯದಿಂದ ಸಂಸದರು ಈ ರೀತಿಯ ಹೇಳಿಕೆಗಳನ್ನು ಹೇಳುತ್ತಾ ಇದ್ದಾರೆ, ಇವರಿಗೆ ಏಳಿಗೆ ಕಾರ್ಯದ ಬಗ್ಗೆ ಆಸಕ್ತಿ ಇಲ್ಲದ ಇವರು ಭಾವನಾತ್ಮಕ ವಿಷಯದ ಬಗ್ಗೆ ಹೆಚ್ಚಿಗೆ ಮಾತನಾಡುತ್ತಾರೆ.

ಎಸ್ ಡಿಪಿಐ ಪಕ್ಷವನ್ನು ಸೈದಾಂತಿಕವಾಗಿ ಎದುರಿಸಲು ಸಾಧ್ಯವಾಗದು ಎಂದು ಅರಿತ ಇವರು ಈ ರೀತಿಯ ಹೇಳಿಕೆಯನ್ನು ಆಡುತ್ತಿದ್ದಾರೆ .ಈ ರೀತಿಯಲ್ಲಿ ಮಾತನಾಡುವ ಇಂಥವರಿಗೆ ಸ್ವೀಕರ್ ಸರಿಯಾದ ಮಾರ್ಗದರ್ಶವನ್ನು ನೀಡಬೇಕೆಂದು ಆಗ್ರಹಿಸಿದರು .
ಜಿಲ್ಲೆಯಲ್ಲಿ ವೈದ್ಯಕೀಯ ಮಾಫಿಯಾ,ಶಿಕ್ಷಣ ಮಾಫಿಯಾಗಳು ನಡೆಯುತ್ತಿದೆ ಆದರೆ ಈ ಬಗ್ಗೆ ಇವರು ಮಾತನಾಡುವುದಿಲ್ಲ ,ನಿಮ್ಮ ಪಕ್ಷದಲ್ಲೇ ದೊಡ್ಡ ಸಂಖ್ಯೆಯಲ್ಲಿರುವ ಅಡಿಕೆ ಕೃಷಿಗಾರರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ ,ಅದು ಬಿಟ್ಟು ಎಸ್ ಡಿಪಿಐಪಕ್ಷದ ಬಗ್ಗೆ ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತೀರಾ . ಈ ಬೇಜವಾಬ್ದಾರಿ ಮಾತುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಸಾದತ್ ಸಂಸದರಿಗೆ ಆಗ್ರಹಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಪಿಐ ಪಕ್ಷದ ಸದಸ್ಯರಾದ ಅಶ್ರಫ್ ಅಡ್ಡೂರು , ಅಶ್ರಫ್ ತಲಪಾಡಿ , ಮುನಿಷಾ ಆಲಿ . ಮುಂತಾದವರು ಉಪಸ್ಥಿತರಿದ್ದರು .

