ಮುಂಬೈ : ಬಾಲಿವುಡ್ನ ಐಕಾನಿಕ್ ಚಿತ್ರ ‘3 ಈಡಿಯಟ್ಸ್’ ನ ಮುಂದುವರಿದ ಭಾಗ ತಯಾರಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ, ಅಮಿರ್ ಖಾನ್ ,ಕರೀನಾ ಕಪೂರ್,ಆರ್. ಮಾಧವನ್ ಮತ್ತು ಶರ್ಮಾನ್ ಜೋಶಿ ಸೇರಿದಂತೆ ಮೂಲ ತಾರಾಗಣವು ಈ ಹೊಸ ಸಾಹಸಕ್ಕಾಗಿ ಕೈ ಜೋಡಿಸಲಿದ್ದಾರೆ.

ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ ಮತ್ತು ವಿಧು ವಿನೋದ್ ಚೋಪ್ರಾ ಅವರು ಹಿರಾನಿ ಮತ್ತು ಖಾನ್ ಅವರೊಂದಿಗೆ ನಿರ್ಮಿಸಿರುವ ಈ ಚಿತ್ರವು 2026 ರ ದ್ವಿತೀಯಾರ್ಧದಲ್ಲಿ ಚಿತ್ರೀಕರಣ ಆರಂಭಿಸಲಿದೆ. ರಾಜ್ಕುಮಾರ್ ಹಿರಾನಿ ಎರಡನೇ ಭಾಗವಾದ ‘3 ಈಡಿಯಟ್ಸ್ 2’ ಚಿತ್ರಕ್ಕೆ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದಾರೆ ಮತ್ತು ಚಿತ್ರವು 2026 ರಲ್ಲಿ ಬಿಡುಗಡೆ ಆಗಲಿದೆಯಂತೆ.

ರಾಜ್ಕುಮಾರ್ ಹಿರಾನಿ ಮತ್ತು ಆಮೀರ್ ಖಾನ್ ಅವರು ತಮ್ಮ ಬಹುನಿರೀಕ್ಷಿತ ದಾದಾಸಾಹೇಬ್ ಫಾಲ್ಕೆ ಜೀವನಚರಿತ್ರೆಯ ಸ್ಕ್ರಿಪ್ಟ್ ನಿಂದ ಸಂಪೂರ್ಣವಾಗಿ ತೃಪ್ತರಾಗದ ಕಾರಣ, ಆ ಚಿತ್ರದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಇದೆ.
ತಂಡವು ಅಂತಿಮವಾಗಿ ಅದೇ ಪ್ರಮುಖ ಪಾತ್ರಧಾರಿಗಳನ್ನು ಒಳಗೊಂಡ ಮುಂದಿನ ಭಾಗದೊಂದಿಗೆ ಮುಂದುವರಿಯುತ್ತಿದೆ.”ಸ್ಕ್ರಿಪ್ಟ್ ಅನ್ನು ಲಾಕ್ ಮಾಡಲಾಗಿದೆ ಮತ್ತು ತಂಡವು ಅದಕ್ಕಾಗಿ ತುಂಬಾ ಉತ್ಸುಕವಾಗಿದೆ. ಮೊದಲ ಚಿತ್ರದ ಮ್ಯಾಜಿಕ್ ಮತ್ತೆ ಮರಳಿದೆ. ಮತ್ತು ಇದು ಮೊದಲ ಭಾಗದಷ್ಟೇ ತಮಾಷೆ, ಭಾವನಾತ್ಮಕ ಮತ್ತು ಅರ್ಥಪೂರ್ಣವಾಗಲಿದೆ.”ಎಂದು ಇರಾನಿ ಹೇಳಿದ್ದಾರೆ.

2009 ರಲ್ಲಿ ಬಿಡುಗಡೆಯಾದ 3 ಈಡಿಯಟ್ಸ್ ಒಂದು ಕಲ್ಟ್ ಕ್ಲಾಸಿಕ್ ಆಗಿ ಮಾರ್ಪಟ್ಟಿತು ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು. ₹200 ಕೋಟಿ ಕ್ಲಬ್ಗೆ ಪ್ರವೇಶಿಸಿದ ಮೊದಲ ಭಾರತೀಯ ಚಿತ್ರವಾಗಿ ಇದು ಇತಿಹಾಸ ನಿರ್ಮಿಸಿತು,

