ಮಂಗಳೂರು : ಮಂಗಳೂರಿನ ಹ್ರದಯಭಾಗ ಕದ್ರಿ ಪರಿಸರದಲ್ಲಿ ಸುಮಾರು 60000 ಚದರ ಅಡಿಗಳ “ವಾಗ್ವೇವಿ ಟವರ್ಸ” ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 13 ರಂದು ಬೆಳಿಗ್ಗೆ 8:31ಕ್ಕೆ ಉದ್ಯಮಿ ಡಾ.ಪಿ.ದಯಾನಂದ ಪೈ ಯವರು ಈ ಹೊಸ ಯೋಜನೆಯ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷರಾದ ಡಾ.ಕಸ್ತೂರಿ ಮೋಹನ್ ಪೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕದ್ರಿಯಲ್ಲಿ ಹಿಂದೆ 1965ರಲ್ಲಿ ಅಂದಿನ ಅಗತ್ಯದ ಪ್ರಮಾಣ 750 ಸೀಟುಗಳ ನಗರದ ಮೊತ್ತ ಮೊದಲ ಅತ್ಯಾಧುನಿಕವಾದ ಸುಜೀರ ಸಿ.ವಿ.ನಾಯಕ ಸಭಾಗೃಹದ ಶಿಲಾನ್ಯಾಸ ಮಾಡಿದ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಎರಡು ವರ್ಷದೊಳಗೆ ಜನತೆಗೆ ಅರ್ಪಣೆ ಮಾಡಿ ಮುಂದೆ ಹವಾ ನಿಯಂತ್ರಿತ ಮಾಡಿತ್ತು. 60 ವರ್ಷಗಳ ನಂತರ ತನ್ನ ನವೀನ ಯೋಜನೆ, ಇಂದಿನ ಅವಶ್ಯಕತೆ ಪ್ರಮಾಣ 60000 ಚದರ ಅಡಿಗಳ ‘ವಾಗ್ಗೇವಿ ಟವರ್ಸ್’ ಕಟ್ಟಡದ ಶಿಲಾನ್ಯಾಸ ಮಾಡಿ ಇದನ್ನು ಎರಡು ವರುಷಗಳ ಸಮಯದಲ್ಲಿ ಪೂರ್ಣಗೊಳಿಸಲು ಸಜ್ಜಾಗಿದೆ.ಎಂದು ಡಾ.ಕಸ್ತೂರಿ ಮೋಹನ್ ಪೈ ಹೇಳಿದರು.

ಇಪ್ಪತ್ತನೇಯ ಶತಮಾನದಲ್ಲಿ ಇನ್ನೂ ಆರ್ಥಿಕವಾಗಿ ಬೆಳೆಯದ ಸಮಾಜಕ್ಕೆ ಶಿಕ್ಷಣ, ವಸತಿ, ವೈದ್ಯಕೀಯ ನೆರವನ್ನೀಯಲು ಇಸವಿ 1938ರಲ್ಲಿ ಪ್ರಾರಂಭಿಸಿದ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘವನ್ನು ಸ್ಥಾಪಿಸಿ ಸಮಾಜಕ್ಕೆ ಬೆನ್ನೆಲುಬಾಗಿ ನಿಂತಿತ್ತು.
ಇಂದು ಭಾರತದ ಶೈಕ್ಷಣಿಕ ಜಿಗಿತದಿಂದ ಐ.ಟಿ. ಮತ್ತು ಸ್ಟಾರ್ಟಪ್ ಉದ್ಯಮದಿಂದ ಹುಟ್ಟೂರು ಮತ್ತು ಹೆತ್ತವರನ್ನು ಬಿಟ್ಟು ದೂರದಲ್ಲಿ ಕಾರ್ಯಪ್ರವೃತ್ತವಾದ ಯುವಜನಾಂಗಕ್ಕೆ ನಮ್ಮ ಕರಾವಳಿ ಜಿಲ್ಲೆಗಳಲ್ಲೇ ಅವರ ಉದ್ಯಮ ನಡೆಸಿ ತಮ್ಮ ಹೆತ್ತವರೊಡನೆ ನೆಲೆನಿಲ್ಲಲು ಸವಲತ್ತು ಮಾಡಿಕೊಡಲು 20000 ಚದರ ಅಡಿಯ ಐ.ಟಿ. ಮತ್ತು ಸ್ಟಾರ್ಟಪ್ ಸ್ಥಳಾವಕಾಶ, 5000 ಚದರ ಅಡಿಗಳಷ್ಟು ಅತ್ಯಾಧುನಿಕ ಮಲ್ಟಿ ಸ್ಪೆಶ್ಯಾಲಿಟಿ ಹೊರರೋಗಿ ಚಿಕಿತ್ಸಾ ವಿಭಾಗ, ಹಿಂದಿನ ಸಮಾಜಮುಖಿ ಸೇವಾ ಕಾರ್ಯಗಳನ್ನು ಇಂದೂ ಮುನ್ನಡೆಸಲು 5000 ಚದರ ಅಡಿಗಳಷ್ಟು ಸೇವಾ ಸಂಘದ ಕೇಂದ್ರ, ಉದ್ಯೋಗಸ್ತ ಒಂಟಿ ಮಹಿಳೆಯರಿಗಾಗಿ 5000 ಚದರ ಅಡಿಗಳಷ್ಟು ಸ್ವಾವಲಂಭಿ ವಸತಿ ನಿಲಯ, ಎಳೆಯರಿಗಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕೇಂದ್ರ ಇತ್ಯಾದಿಗಳನ್ನೊಡಗೂಡಿದ, 70 ವಾಹನಗಳ ನಿಲುಗಡೆಗೆ ಸ್ಥಳವಿರುವ ಈ ವಾಗ್ಗೇವಿ ಟವರ್ಸ ಒಳಗೊಂಡಿದೆ ಎಂದರು.

ಶಿಲಾನ್ಯಾಸದ ಬಳಿಕ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ದೇಶದಾದ್ಯಂತ ಗುರುತಿಸಿಕೊಂಡ ಕಟ್ಟಡ ರಚನಾ ಕ್ಷೇತ್ರದ ಗುರುದತ್ತ ಶೆಣೈ, ಉದ್ಯಮ ಕ್ಷೇತ್ರದ ಆನಂದ ಜಿ ಪೈ, ರಾಜ್ಯ ಸರಕಾರದ ಉದ್ಯಮ ಹಾಗೂ ಆರ್ಥಿಕ ವಿಭಾಗದ ಜಂಟಿ ನಿರ್ದೇಶಕರಾದ ಗೋಕುಲದಾಸ ನಾಯಕ್. ವೈದ್ಯಕೀಯ ರಂಗದ ಹಿರಿಯ ರುಮೆಟೊಲಜಿಸ್ಟ ಡಾ. ಸಜ್ಜನ ಶೆಣೈ, ಐ.ಟಿ ಉದ್ಯಮದ ಹೊಸ ಪೀಳಿಗೆಯ ಪ್ರಶಾಂತ ಶೆಣೈ ಕಟಪಾಡಿ, ಸಣ್ಣ ಕೈಗಾರಿಕಾ ಕ್ಷೇತ್ರದ ಕಂದೆಲ್ ಅಜಿತ ಕಾಮತ್, ಹಾಗೂ ಮಹಿಳಾ ಉದ್ಯಮಿ ನಿರ್ಮಲಾ ಟ್ರಾವೆಲ್ ನ ವತಿಕಾ ಕಾಮತ್ ಪೈ ಇವರುಗಳು ಕಾರ್ಯಾಗಾರವನ್ನು ನಡೆಸುತ್ತಾರೆ. ಆಸಕ್ತ ನವಪೀಳಿಗೆಯವರು ಭಾಗವಹಿಸಬಹುದು.ಈ ಎಲ್ಲಾ ಕಾರ್ಯಕ್ರಮಗಳು ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ ಪೈಯವರ ಹಿರಿತನದಲ್ಲಿ ನಡೆಯುವುದು.
ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್. ಶೆಣೈ, ಡಾ. ರಮೇಶ ಪೈ, ಕುಂಬ್ಳೆ ನರಸಿಂಹ ಪ್ರಭು, ಸುಚಿತ್ರಾ ಶೆಣೈ, ಎಮ್. ಆರ್ ಕಾಮತ್ ಹಾಗೂ ಆಡಳಿತಾಧಿಕಾರಿ ವೆಂಕಟೇಶ ಬಾಳಿಗಾ ಉಪಸ್ಥಿತರಿದ್ದರು

