ಮಂಗಳೂರು : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ದ.ಕ ಜಿಲ್ಲಾ ಮಹಾಸಮ್ಮೇಳನ ಹಾಗೂ ವಿಜಯ ದಿವಸ್ ಜಂಟಿ ಆಚರಣೆಯು ಡಿ.13 ರಂದು ಬೆಳಿಗ್ಗೆ 9.3೦ ರಿಂದ ಕಡಬ ತಾಲ್ಲೂಕಿನ ನೆಲ್ಯಾಡಿ ಬಿರ್ವಾ ಸಭಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು,ಮಾಜಿ ಸೈನಿಕರಾದ ನೋಬರ್ಟ್ ರೋಡ್ರಿಗಸ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ಸಭೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷರಾದ ಡಾ| ಶಿವಣ್ಣ ಎನ್. ಕೆ. ಹಾಗೂ ಮಹಾ ಪೋಷಕರು ಮಾಜಿ ಸಂಸದೆಯಾದ ಡಾ| ತೇಜಸ್ವಿನಿ ಗೌಡ, ಶಾಸಕರುಗಳಾದ ಅಶೋಕ್ ರೈ ಹಾಗೂ ಶಾಸಕಿ ಭಗೀರತಿ ಮುರುಳ್ಯ ,ಪುತ್ತೂರು ಸಹಾಯಕ ಆಯುಕ್ತರಾದ ಸ್ಟೇಲಾ ವರ್ಗೀಸ್, ಇ.ಸಿ.ಹೆಚ್.ಎಸ್ ಆಯುಕ್ತರಾದ ಕರ್ನ್ಲ್ ಬೀಡೆ, ಕೌಕ್ರಾಡಿ ಪಂಚಾಯತ್ ಅಧ್ಯಕ್ಷರಾರ ಉದಯ್ ಕುಮಾರ್ ಗೌಡ ಹಾಗೂ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ವೀರ ನಾರಿಯರು, ಕಡಬ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರು ತಾಲ್ಲೂಕು ಘಟಕಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ ಎಂದರು.

1971ರಲ್ಲಿ ಇಂಡೋ ಪಾಕ್ ಯುದ್ಧದಲ್ಲಿ ಭಾಗಿಯಾದ ಈ ಪ್ರದೇಶದ ವೀರಯೋಧರಿಗೆ ಹಾಗೂ ವೀರನಾರಿಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಅಲ್ಲದೆ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರಾದ ಗೋಪಾಲ ಗೌಡ ,ಮ್ಯಾಥ್ಯೂ ಪಿ.ಜಿ, ಎಂ ಪಿ ತಂಗಚ್ಚನ್, ಸೆಬಾಸ್ಟೀನ್ , ಚಂದಪ್ಪ ಡಿ.ಎಸ್, ಧನಂಜಯ್ ಮುಂತಾದವರು ಉಪಸ್ಥಿತರಿದ್ದರು .

