ಬೆಂಗಳೂರು : ಸ್ಯಾಂಡಲ್ವುಡ್ನ ಕನಸಿನ ರಾಣಿ ಮಾಲಾಶ್ರೀ ಅವರು ತಮ್ಮ ಮಗಳು ಆರಾಧನಾ ರಾಮ್ ಹಾಗೂ ಪುತ್ರ ಆರ್ಯನ್ ಜೊತೆ ಶಿರಡಿಗೆ ಭೇಟಿ ನೀಡಿ ಬಂಗಾರದ ಕಿರೀಟವನ್ನ ಶಿರ್ಡಿ ಸಾಯಿಬಾಬಾಗೆ ಅರ್ಪಿಸಿದ್ದಾರೆ.

ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿ ಕೊಂಡಿರುವ ಮಾಲಾಶ್ರೀ ಅವರು 1989ರಲ್ಲಿ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.
ತಮ್ಮ ಮೊದಲ ಕನ್ನಡ ಸಿನಿಮಾ ನಂಜುಂಡಿ ಕಲ್ಯಾಣ ಶುರು ಮಾಡುವ ಮುನ್ನ ಶಿರ್ಡಿ ಸಾಯಿಬಾಬಾ ಅವರ ಆರ್ಶೀವಾದವನ್ನ ಪಡೆದು ಸಿನಿಮಾವನ್ನ ಆರಂಭಿಸಿದ್ದರಂತೆ. ಮಾಲಾಶ್ರೀ ಅವರ ಈ ಸಕ್ಸಸ್ ಹಿಂದೆ ಶಿರಡಿ ಸಾಯಿಬಾಬಾ ಅವರ ಆರ್ಶೀವಾದ ಅಚಲವಾಗಿದೆ ಎಂದಿದ್ದಾರೆ.

ತಮ್ಮ ಪುತ್ರಿ ಆರಾಧನಾ ಸಿನಿಮಾ ಶುರು ಮಾಡುವ ಮುನ್ನ ಶಿರಡಿಗೆ ಭೇಟಿ ನೀಡಿದ್ದೆವು. ನಂತರ ದರ್ಶನ್ ಜೊತೆಗೆ ನಾಯಕಿಯಾಗಿ ಅಭಿನಯಿಸಿದ ಕಾಟೇರ ಚಿತ್ರವೂ ಸೂಪರ್ ಹಿಟ್ ಆಯಿತು.ಇದೀಗ ಶಿರಡಿಗೆ ಭೇಟಿಕೊಟ್ಟು ಚಿನ್ನದ ಕಿರೀಟವನ್ನ ಅರ್ಪಿಸಿದ್ದೇವೆ.ನಮ್ಮ ಕುಟುಂಬದ ಶಕ್ತಿ ಸಾಯಿಬಾಬಾ ಆಗಿದ್ದಾರೆ. ಹೀಗಾಗಿ, ನಮ್ಮ ಕಡೆಯಿಂದ ಒಂದು ಚಿಕ್ಕ ಉಡುಗೊರೆ ನೀಡಿದ್ದೇವೆ ಅಷ್ಟೇ ಎಂದು ನಟಿ ಮಾಲಾಶ್ರೀ ಅವರು ಚಿನ್ನದ ಕಿರೀಟ ನೀಡಿದ ನಂತರ ಹೇಳಿದರು.

