ದುಬಾಯಿ : ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು ಭಾನುವಾರ ದುಬಾಯಿನ ಜಬಿಲ್ ಪಾರ್ಕ್ ನಲ್ಲಿ ನಡೆಯಿತು.
ಅನಿವಾಸಿ ಕುಂದಗನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಭಾಷಿಗರನ್ನು ಒಗ್ಗೂಡಿಸುದರ ಜೊತೆಗೆ ಭಾಷೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಹಲವಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಹಾಗೇ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶೇಷ ರೀತಿಯಲ್ಲಿ ಫ್ಯಾಮಿಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಫರ್ಧೆಗಳು ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬ್ಬಿ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು.
ಆಟೋಟ ಸ್ಫರ್ಧೆಗಳಿಗೆ ಐದು ತಂಡಗಳಾಗಿ ಮಾಡಲಾಗಿದ್ದು ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ ,ವರಾಹಿ ,ಖೇಟಾ,ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು ನದಿಗಳ ಹೆಸರು ನೀಡಲಾಯಿತು.

ಗ್ರಾಮೀಣ ಆಟೋಟ ಸ್ಫರ್ಧೆಗಳ ಜೊತೆಗೆ, ವೈಯಕ್ತಿಕ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ಚಾಂಪಿಯನ್ ಆಗಿ ಮಂಜುನಾಥ ನಾಯಕತ್ವದ ಕುಬ್ಜಾ ತಂಡ ಹೊರಹೊಮ್ಮಿದರೆ, ರನ್ನರ್ಸ್ ಪ್ರಶಸ್ತಿಯನ್ನು ಸಂತೋಷ ನಾಯಕತ್ವದ ಸೌಪರ್ಣಿಕ ತಂಡ ಪಡೆದು ಕೊಂಡಿತು
ಕಾರ್ಯಕ್ರಮವನ್ನು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಸ್ಥಾಪಕಧ್ಯಕ್ಷರಾಗಿರುವ ಶ್ರೀಯುತ ಸದಾನ್ ದಾಸ್ ಉಧ್ಘಾಟಿಸಿದರು ಮತ್ತು ಅಂತಿಮವಾಗಿ ಸಂಜೆ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಶ್ರೀ ಸದಾನ್ ದಾಸ್
ಉಪಾಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಮತ್ತು ಸುಜೀತ್ ಶೆಟ್ಟಿ ಕಾಳವಾರ ಕಾರ್ಯದರ್ಶಿಯಾದ ಶ್ರೀ ಸುಧಾಕರ ಪೂಜಾರಿ ಪಡುಕೋಣೆ , ಸದಸ್ಯರುಗಳಾದ ಶ್ರೀವಾಸು ಕುಮಾರ್ ಶೆಟ್ಟಿ , ಶ್ರೀ ಮಂಜುನಾಥ ದೇವಾಡಿಗ, ಶ್ರೀಸತೀಶ್ ಹಂಗಳೂರು , ಮನೋಜ್ ದೇವಾಡಿಗ , ಶ್ರೀಚಂದ್ರಶೇಖರ ಕೋಡಿ , ವಿಘ್ನೇಶ್ ಕುಂದಾಪುರ ಮತ್ತು ಶ್ರೀಮತಿ ಆಶಾ ಜೊತೆಗಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಸುರೇಶ್ ಡಿ ಹೆಚ್ ಎಲ್ ಮತ್ತು ಬಿ.ಎಂ ಗ್ರೂಫ್ ಚೇರ್ಮೇನ್ ಡಾ.ಕನಕರಾಜ್ ಪ್ರವೀಣ್ ಆಚಾರ್ ,ಸಮರ್ಥ್ ಶೆಟ್ಟಿ ಉಪಸ್ಥಿತರಿದ್ದರು.ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಕುಂದಾಪ್ರ ಕನ್ನಡಿಗರು ಬಹಳ ಉತ್ಸುಕರಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಸಂಘದ ಸದಸ್ಯರಾದ ವಿಘ್ನೇಶ್ ಕುಂದಾಪುರ ನೆರವೇರಿಸಿದರು.

