ಮಂಗಳೂರು : ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಹಬ್ಬ, ಕ್ರಿಸ್ಮಸ್ ಸಂಭ್ರಮಾಚರಣೆ ಹಾಗೂ ರಂಜಾನ್ ಹಬ್ಬವನ್ನು ಮಂಗಳೂರಿನ ಹಲವು ಕಡೆಗಳಲ್ಲಿ ಸರ್ವಧರ್ಮಿಯರು ಸೇರಿಕೊಂಡು ಆಚರಿಸುತ್ತಾ ಬರುತ್ತಿದ್ದಾರೆ.
ಈ ಬಾರಿ 11ನೇ ವರ್ಷದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಡಿ 22 ರಂದು ನಗರದ ಜೆಪ್ಪು ಸಂತ ಅಂತೋನಿ ಆಶ್ರಮದ ತೆರೆದ ಮೈದಾನದಲ್ಲಿ ಸಂಜೆ 3:30 ರಿಂದ ರಾತ್ರಿ 8:00ರ ವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಜೆ ನಾಗೇಂದ್ರ ಕುಮಾರ್ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಕ್ಯಾರಲ್ ಸಂಗೀತ ಸ್ಪರ್ಧೆ ಹಾಗೂ ಸರ್ವಧರ್ಮದ ಸಭಾ ಕಾರ್ಯಕ್ರಮ ನಡೆಯಲಿದೆ.
ಕ್ಯಾರಲ್ ಸಂಗೀತ ಸ್ಪರ್ಧೆಯು ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ. ಈ ಸ್ಪರ್ಧೆಯಲ್ಲಿ ಒಬ್ಬ ವ್ಯಕ್ತಿಗೆ ಭಾಗವಹಿಸುವ ಅವಕಾಶವಿದೆ. ವಿಜೇತರಿಗೆ ಪ್ರಥಮ ರೂ.3,000/- ದ್ವಿತೀಯ ರೂ.2,000/- ತೃತೀಯ ರೂ.1,000/ ರೂಪಾಯಿ ನೀಡಲಾಗುವುದು.
ಹಾಗೂ ಕ್ರಿಸ್ಮಸ್ ವೋಟಾಕ್ಸ್ ಇತರ ಸ್ಪರ್ಧೆಗಳು ನಡೆಯಲಿದೆ. ಈ ಸ್ಪರ್ಧೆಗೆ 15 ನಿಮಿಷದ ಕಾಲಾವಕಾಶವಿದೆ.ಈ ಸ್ಪರ್ಧೆಯಲ್ಲಿ ಡ್ಯಾನ್ಸ್, ಸಂಗೀತ, ಸ್ಕಿಟ್, ಸಂತಾಕ್ಲೋಸ್, ಹಾಗೂ ಕಾರ್ಯಕ್ರಮ ನಿರೂಪಣೆ ಕೂಡಾ ಅಳವಡಿಕೆಯಾಗಿದೆ. ವಿಜೇತರರಿಗೆ ಪ್ರಥಮ ಬಹುಮಾನ: ರೂ.20,000/-, ದ್ವಿತೀಯ ಬಹುಮಾನ: ರೂ.15,000/-ತೃತೀಯ ಬಹುಮಾನ: ರೂ.10,000/- ವನ್ನು ನೀಡಲಾಗುವುದೆಂದು ಅವರು ತಿಳಿಸಿದರು.

ಸಂಜೆ ಗಂಟೆ 5:30ಕ್ಕೆ ಕ್ರಿಸ್ಮಸ್ ಸಂಭ್ರಮಾಚರಣೆಯ ಭಾವೈಕ್ಯತೆಯ ಸಂಗಮದ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ವಂ.ಡಾ| ಜೆರಾಲ್ಡ್ ಐಸಾಕ್ ಲೋಬೋ (ಧರ್ಮಾಧ್ಯಕ್ಷರು ಉಡುಪಿ ಧರ್ಮಪ್ರಾಂತ್ಯ) ಹಾಗೂ ಕ್ರಿಸ್ಮಸ್ ಸಂದೇಶವನ್ನು ಶ್ರೀ ಶ್ರೀ ಯುಗೇಶಾನಂದ ಸ್ವಾಮಿಜಿ (ಶ್ರೀ ರಾಮಕೃಷ್ಣ ಮಠ ಮಂಗಳಾದೇವಿ ಮಂಗಳೂರು) ಇವರು ನೀಡಲಿದ್ದಾರೆ.
ಅತಿಥಿಗಳಾಗಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಕಾರಿಯಾ ಜೋಕಟ್ಟೆ , ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ದರ್ಶನ್ ಹೆಚ್ ವಿ , ಮಂಗಳೂರು ನಗರ ಪೊಲೀಸ್ ಆಯುಕ್ತಾರದ ಸುಧೀರ್ ಕುಮಾರ್ ರೆಡ್ಡಿ ಸಹಿತ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಮೀನಾ ಟೆಲ್ಲಿಸ್, ಶ್ರೀಮತಿ ವಿದ್ಯಾ ಅತ್ತಾವರ, ಇಮ್ರಾನ್ ಕುದ್ರೋಳಿ ಮುಂತಾದವರು ಉಪಸ್ಥಿತರಿದ್ದರು.

