ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ , ನಿಟ್ಟೆ ಶಿಕ್ಷಣ ಸಂಸ್ಥೆ , ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 ,ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಡಿ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ ಡಿಸೆಂಬರ್ 16 ರಂದು ಬೆಳಿಗ್ಗೆ 9:00 ಗಂಟೆಗೆ, “ವಿಜಯ ದಿವಸ” ವನ್ನು ಮಂಗಳೂರು ನಗರದ ಕದ್ರಿ ಹಿಲ್ಸ್ ನಲ್ಲಿರುವ ಯೋಧರ ಯುದ್ಧಸ್ಮಾರಕದಲ್ಲಿ ಹೂಹಾರವನ್ನು ಅರ್ಪಿಸಿ, ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ವಿಜಯ ದಿವಸವನ್ನು ನಮ್ಮ ದೇಶದಲ್ಲಿ ಡಿಸೆಂಬರ್ 16 ರಂದು ಆಚರಿಸುವುದು ರೂಢಿಯಾಗಿದೆ. 1971 ಡಿಸೆಂಬರ್ 16 ರಂದು ಭಾರತವು ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ ಸವಿ ನೆನಪಿಗಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ .ಈ ವಿಜಯದ ಹಿಂದೆ ತ್ಯಾಗ ಬಲಿದಾನದ ಮಹತ್ವದ ಕೊಡುಗೆಯಿದೆ .ವೀರ ಸೈನಿಕರ ವೀರಾವೇಶದ ಹೋರಾಟ ಅಡಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್ ವಿ , ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ , ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕುಮಾರ್ ,ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಕರ್ನಲ್ ಜಯಚಂದ್ರನ್ , ಕಾರ್ಯದರ್ಶಿಗಳಾದ ಕಾ|ದೀಪಕ್ ಅಡ್ಯಂತಾಯ , ಕಾ।ರಾಜೇಶ್ ಹೊಳ್ಳ , ಕಾ|ಪಿ.ಕೆ ಶೆಟ್ಟಿ , ಸುಬ್ಬೇದರ್ ಅಪ್ಪು ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .

