ದುಬೈ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರತೀಯ ತಾರೆಯರು ಕೂಡ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹೆಸರಿನಲ್ಲಿ ದುಬೈಯಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡ 5,000 ಕೋಟಿ ರೂ.ಗೆ ಮಾರಾಟವಾಗಿದೆ.

ರಿಯಲ್ ಎಸ್ಟೇಟ್ ದೈತ್ಯ ಡ್ಯಾನ್ಯೂಬ್ ಗ್ರೂಪ್ ನಿರ್ಮಿಸಿದ ‘ಶಾರುಖ್ಸ್ ಬೈ ಡ್ಯಾನ್ಯೂಬ್’ ವಾಣಿಜ್ಯ ಕಟ್ಟಡ ಮಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.ದುಬೈಯ ಪ್ರಮುಖ ವಾಣಿಜ್ಯ ನಗರವಾದ ಶೇಖ್ ಜಾಯೆದ್ ರಸ್ತೆಯಲ್ಲಿ ನಿರ್ಮಿಸಲಾಗುವ ಈ ಕಟ್ಟಡವು 1 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ 55 ಮಹಡಿಯ ಗೋಪುರದ ಒಟ್ಟು ನಿರ್ಮಾಣ ವೆಚ್ಚ ಸುಮಾರು 3500 ಕೋಟಿ ರೂಪಾಯಿ,ಈ ಗೋಪುರವು ಕಚೇರಿ ಸ್ಥಳಾವಕಾಶಕ್ಕೆ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಕಟ್ಟಡ ಪೂರ್ಣಗೊಳ್ಳುವ ಮೊದಲೇ ₹ 5000 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ
ದುಬೈ ಎಕ್ಸಿಬಿಷನ್ ಟವರ್ನಲ್ಲಿ ನಡೆದ ಸಮಾರಂಭದಲ್ಲಿ ವಿಐಪಿ,ಸೆಲೆಬ್ರಟಿಗಳು, ಕಂಪನಿ ಮಾಲಕರು,ರಿಯಲ್ ಎಸ್ಟೇಟ್ ಮಾಲಕರು ಸೇರಿದಂತೆ ಸುಮಾರು 7000 ಕ್ಕೂ ಅಧಿಕ ಜನರು ಸೇರಿದ್ದರು. ಡ್ಯಾನ್ಯೂಬ್ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ರಿಜ್ವಾನ್ ಸಜನ್ ಗೋಪುರದ ಎಲ್ಲಾ ಘಟಕಗಳ ಮಾರಾಟವನ್ನು ಘೋಷಿಸಿದರು

ಈ ಸಂಧರ್ಭದಲ್ಲಿ ನಟ ಶಾರುಖ್ ಖಾನ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.ದುಬೈನಲ್ಲಿ ಇಷ್ಟು ದೊಡ್ಡ ಯೋಜನೆಗೆ ತಮ್ಮ ಹೆಸರನ್ನು ನೀಡಿದ್ದಕ್ಕೆ ನನಗೆ ಗೌರವವಾಗಿದೆ ಎಂದು ಶಾರುಖ್ ಖಾನ್ ಹೇಳಿದರು. 2029 ರ ವೇಳೆಗೆ 55 ಅಂತಸ್ತಿನ ಗೋಪುರವನ್ನು ಪೂರ್ಣಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ.
2007 ರಲ್ಲಿ ರಾಸ್ ಅಲ್ ಖೈಮಾದ ಡಾನಾ ದ್ವೀಪದಲ್ಲಿ ವಸತಿ ಕಟ್ಟಡಗಳನ್ನು ಒಳಗೊಂಡಿರುವ 6.3 ಮಿಲಿಯನ್ ಚದರ ಮೀಟರ್ SRK ಬೌಲೆವಾರ್ಡ್ ಯೋಜನೆಯನ್ನು ನಟ ಘೋಷಿಸಿದ್ದರು, ಆದರೆ ನಂತರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅದನ್ನು ಸ್ಥಗಿತಗೊಳಿಸಲಾಯಿತು.

