ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಈ ಆದೇಶ ನೀಡಿದ್ದು, 2026ರ ಡಿಸೆಂಬರ್ 17ರವರೆಗೆ ತಿಮರೋಡಿ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಇರಬೇಕಿದೆ.
ಡಿಸೆಂಬರ್ 7ರಂದು ಸಹಾಯಕ ಆಯುಕ್ತರ ಗಡಿಪಾರು ನೊಟೀಸ್ ಗೆ ಆಕ್ಷೇಪಣೆ ಸಲ್ಲಿಸಿದ್ದ ಮಹೇಶ್ ತಿಮರೋಡಿ. ಇದೀಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಇದಕ್ಕೆ ಉತ್ತರ ಎಂಬಂತೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ. ತಿಮರೋಡಿ ವಿರುದ್ದದ ಈ ಹಿಂದಿನ ಕೇಸ್ ಗಳ ಜೊತೆಗೆ ಹಾಲಿ ಕೆಲ ಕೇಸು ಸೇರಿಸಿಕೊಂಡು ಗಡಿಪಾರು ಆದೇಶ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದಿನಿಂದ 2026ರ ಡಿ.17ರವರೆಗೆ ಒಟ್ಟು ಒಂದು ವರ್ಷಗಳ ಕಾಲ ಗಡಿಪಾರಿಗೆ ಆದೇಶ ನೀಡಲಾಗಿದೆ.

