ಮಂಗಳೂರು : ಲಯನ್ ಶೋಭಾ ಭಾಸ್ಕರನ್ ರವರ ಲತಾ ಕಿ ಆವಾಝ್ ಶೋಭಾ ಕೆ ಸಾತ್ ಕಾರ್ಯಕ್ರಮವು ಇತ್ತೀಚೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕವಿ ಹುಸೈನ್ ಕಾಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನದ ಸಂಗೀತ ಗುರು ರೋಷನ್ ಫ್ರಾನ್ಸಿಸ್ ಮಾರ್ಟಿಸ್ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ನ ಜಿಲ್ಲಾ ಗವರ್ನರ್ ಲಯನ್ ಕುಡುಪಿ ಅರವಿಂದ್ ಶೆಣೈ ಪಿಎಂಜೆಎಫ್, ಮಂಗಳೂರು ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ರಾಜನ್, ದ.ಕ. ಮತ್ತು ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಧನು ರಾಜ್, ಮಂಜೇಶ್ವರ ಶಬರಿ ಸೌಂಡ್ಸ್ ನ ಜಯೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಾಯಕಿ ಹಾಗೂ ಸಂಯೋಜಕಿಯಾದ ಶೋಭಾ ಭಾಸ್ಕರನ್ ಪ್ರಸ್ತಾವನೆ ಗೈದರು. ಗಾಯಕರಾದ ಮನೋಜ್ ಹಾಗೂ ನೌಶಾದ್ ಸ್ವಾಗತಿಸಿದರು.ಗಾಯಕಿ ಕರಿಷ್ಮಾ ಧನ್ಯವಾದ ಸಮರ್ಪಿಸಿದರು. ಗಾಯಕ ಅರುಣ್ ಕಾರ್ಯಕ್ರಮ ನಿರೂಪಿಸಿದರು. ಪುಟಾಣಿ ಅನಗ ಮತ್ತು ಗಾಯಕಿಯರಾದ ಕರಿಷ್ಮಾ, ಜೀವಿತಾ, ವಿಮಲ ಪ್ರಾರ್ಥನೆ ಗೈದರು.

